Tuesday, September 10, 2024
Homeತಾಜಾ ಸುದ್ದಿಬಿಗ್ ಬ್ರೇಕಿಂಗ್ : ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ಇನ್ನಿಲ್ಲ

ಬಿಗ್ ಬ್ರೇಕಿಂಗ್ : ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ಇನ್ನಿಲ್ಲ

spot_img
- Advertisement -
- Advertisement -

ಖ್ಯಾತ ನಟ ಇರ್ಫಾನ್​ ಖಾನ್​ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಸಿನಿಮಾ ಲೋಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಟ  ರಿಷಿ ಕಪೂರ್ ​ ಅವರು ಇಂದು ಮುಂಜಾನೆ ಮುಂಬೈನಲ್ಲಿ ಮೃತಪಟ್ಟಿದ್ದಾರೆ. 

67 ವರ್ಷದ ರಿಷಿ ಕಪೂರ್​ಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. “ರಿಷಿ​ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,” ಎಂದು ರಣಧೀರ್​ ಕಪೂರ್​ ಪಿಟಿಐಗೆ ತಿಳಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 

ಮಾರಕ ಕ್ಯಾನ್ಸರ್​ ಕಾಣಿಸಿಕೊಂಡ ನಂತರ ರಿಷಿ ಕಪೂರ್​ ಅಮೆರಿಕಕ್ಕೆ ತೆರಳಿ ಒಂದು ವರ್ಷ ಚಿಕಿತ್ಸೆ ಪಡೆದಿದ್ದರು. ಕಳೆದ ಸೆಪ್ಟೆಂಬರ್​ನಲ್ಲಿ ಅವರು ಭಾರತಕ್ಕೆ ವಾಪಾಸಾಗಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ರಿಷಿ ಕಪೂರ್ ಕಳೆದ ಏಪ್ರಿಲ್ 2 ರಿಂದ ಯಾವುದೇ ಸಾಮಾಜಿಕ ಜಾಲತಾಣ ಬಳಸಿಲ್ಲ. ಇನ್ನೂ ದೀಪಿಕಾ ಪಡುಕೋಣೆ ಅಭಿನಯದ ಹಾಲಿವುಡ್ ರಿಮೇಕ್ ‘ದಿ ಇನ್ ಟರ್ನ್’ ಸಿನಿಮಾದಲ್ಲಿ ಬಣ್ಣ ಹಚ್ಚಬೇಕಿತ್ತು.

- Advertisement -
spot_img

Latest News

error: Content is protected !!