Friday, June 5, 2026
Homeಕರಾವಳಿಉಡುಪಿಕೊಲ್ಲೂರಿನಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಭೇಟಿಯಾದ ರಿಷಭ್ ಶೆಟ್ಟಿ ದಂಪತಿ

ಕೊಲ್ಲೂರಿನಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಭೇಟಿಯಾದ ರಿಷಭ್ ಶೆಟ್ಟಿ ದಂಪತಿ

- Advertisement -
- Advertisement -

ಉಡುಪಿ; ರಿಷಭ್ ಶೆಟ್ಟಿ ದಂಪತಿ ಕೊಲ್ಲೂರಿನಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಭೇಟಿಯಾಗಿದ್ದಾರೆ.ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ಕುಂದಾಪುರಕ್ಕೆ ಆಗಮಿಸಿದ್ದ ಲಾಲೆಟ್ಟಾ ರನ್ನು ರಿಷಬ್ ಶೆಟ್ಟಿ ದಂಪತಿ ಭೇಟಿ ಮಾಡಿದ್ದಾರೆ.


ಭೇಟಿಯ  ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಲೆಜಂಡರಿ ನಟನನ್ನು ಭೇಟಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಕಾಂತಾರದ ಭಾಗ 1 ರ ಶೂಟಿಂಗ್ ನಲ್ಲಿರುವ ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯಲ್ಲಿ ಬೃಹತ್ ಸೆಟ್ ಗಳನ್ನು ಹಾಕಿ ಶೂಟಿಂಗ್ ನಡೆಸುತ್ತಿದ್ದಾರೆ.


ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊತ್ತ ಈ ಚಿತ್ರದ ಶೂಟಿಂಗ್‌ ಕೊಡಚಾದ್ರಿ ಬೆಟ್ಟದ ಸುತ್ತಮುತ್ತಲೂ ನಡೆಯಲಿದೆ. ಹೀಗಾಗಿ ರಿಷಬ್‌ ತಮ್ಮ ಊರಿನಲ್ಲೇ ಬೀಡುಬಿಟ್ಟಿದ್ದಾರೆ. ಕೊಲ್ಲೂರು ದೇವಸ್ಥಾನ ಕೆರಾಡಿಗೆ ಸಮೀಪದಲ್ಲೇ ಇದ್ದು, ಇದೇ ಸಂದರ್ಭದಲ್ಲಿ ಮೋಹನ್‌ಲಾಲ್‌ ಅವರನ್ನು ಭೇಟಿಯಾಗಿದ್ದಾರೆ.

- Advertisement -

Latest News

error: Content is protected !!