Friday, May 17, 2024
Homeಕರಾವಳಿಬೆಳ್ತಂಗಡಿ : ಉಜಿರೆ ಎಂ.ಎಸ್.ಎಸ್‌ ಲಾಡ್ಜ್ ಮೇಲೆ ದಾಳಿ ಪ್ರಕರಣ: ಮಾಂಸದಂಧೆಯ ಕಿಂಗ್ ಪಿನ್ ಸಹೋದರರು...

ಬೆಳ್ತಂಗಡಿ : ಉಜಿರೆ ಎಂ.ಎಸ್.ಎಸ್‌ ಲಾಡ್ಜ್ ಮೇಲೆ ದಾಳಿ ಪ್ರಕರಣ: ಮಾಂಸದಂಧೆಯ ಕಿಂಗ್ ಪಿನ್ ಸಹೋದರರು ಸೇರಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆಯ ಎಂ.ಎಸ್.ಎಸ್ ಲಾಡ್ಜ್ ವೇಶ್ಯಾವಟಿಕೆ ನಡೆಸುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದ ಪ್ರಕರಣ ಸಂಬಂಧ ಪರಾರಿಯಾದ ಮಾಂಸ ದಂಧೆಯ ಕಿಂಗ್ ಪಿನ್ ಸಹೋದರರಾದ ಸುರೇಶ್ ಪೂಜಾರಿ ಮತ್ತು ರಮೇಶ್ ಪೂಜಾರಿ ಸೇರಿ ಒಟ್ಟು ನಾಲ್ಕು ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ದಾಳಿ ವೇಳೆ ಸಿಕ್ಕ ಐದು ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು. ಇಬ್ಬರನ್ನು ಬಂಧಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಎಂ.ಎಸ್.ಎಸ್ ಲಾಡ್ಜ್ ನಲ್ಲಿ ರಮೇಶ ಪೂಜಾರಿ ಮತ್ತು ಸುರೇಶ ಎಂಬವರು ಸೇರಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ.ಕೆ ರವರಿಗೆ ಫೆ.7 ರಂದು ಸಂಜೆ ಬಂದ ಮಾಹಿತಿ ಯಂತೆ ಸ್ಥಳಕ್ಕೆ ದಾಳಿ ನಡೆಸಲು ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಿಂದ  ಸರ್ಚ್‌ ವಾರಂಟ್‌ ಪಡೆದು ಇನ್ಸ್ಪೆಕ್ಟರ್ ಸತ್ಯನಾರಾಯಣ.ಕೆ , ಸಬ್ ಇನ್ಸ್ಪೆಕ್ಟರ್ ಅರ್ಜುನ್ ಹಾಗೂ  ಠಾಣಾ ಸಿಬ್ಬಂದಿ ಮತ್ತು ಇಬ್ಬರು ಪಂಚಾಯತುದಾರರೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳಾದ  ಸಂತೋಷ್ ಮತ್ತು ಇರ್ಷಾದ್.ಪಿ  ಇಬ್ಬರನ್ನು ವಶಕ್ಕೆ ಪಡೆದುಕೊಂಡು ನೊಂದ ಐದು ಮಂದಿ ಮಹಿಳೆಯರಿಗೆ ರಕ್ಷಣೆ ನೀಡಿ, ಅಲ್ಲಿ ದೊರೆತ ಸೊತ್ತುಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಪರಾರಿಯಾದ ಲಾಡ್ಜ್ ನಡೆಸುತ್ತಿದ್ದ ವೇಶ್ಯಾವಾಟಿಕೆಯ ಕಿಂಗ್ ಪಿನ್ ಗಳಾದ ಸುರೇಶ್ ಪೂಜಾರಿ, ರಮೇಶ್ ಪೂಜಾರಿ , ಬಂಧಿತರಾದ ಸಂತೋಷ್ ಮತ್ತು ಇರ್ಷಾದ್.ಪಿ ವಿರುದ್ಧ 3,4(D) ITP ACT ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!