Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯ ಕೊಲೆ ಪ್ರಕರಣ; ಆರೋಪಿಯ ಪತ್ತೆಗೆ 7 ಪೊಲೀಸ್ ತಂಡಗಳ ರಚನೆ

ಮಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯ ಕೊಲೆ ಪ್ರಕರಣ; ಆರೋಪಿಯ ಪತ್ತೆಗೆ 7 ಪೊಲೀಸ್ ತಂಡಗಳ ರಚನೆ

- Advertisement -
- Advertisement -

ಮಂಗಳೂರು: ಇಲ್ಲಿನ ಹಂಪನಕಟ್ಟೆಯ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ಸೇಲ್ಸ್ ಮ್ಯಾನ್ ರಾಘವೇಂದ್ರ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಲು 7 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

 ಈಗಾಗಲೇ ಸಿಸಿ ಕ್ಯಾಮರಾದ ಮೂಲಕ ಆರೋಪಿಯ ಭಾವಚಿತ್ರ ಪೊಲೀಸರಿಗೆ ದೊರೆತಿದೆ. ಆದರೆ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಆತನ ಪತ್ತೆ ಸವಾಲಾಗಿದ್ದು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಇನ್ನು ಆರೋಪಿ ಜುವೆಲ್ಲರಿ ಶಾಪ್ ನಿಂದ ಹೊರಗೆ ಬಂದ ಬಳಿಕ ಎರಡೆರಡು ರಿಕ್ಷಾಗಳಲ್ಲಿ ಹೋಗುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಮೊದಲು ಹಂಪನಕಟ್ಟೆಯಿಂದ ವಲೆ ನ್ಸಿಯಾದವರೆಗೆ ಒಂದು ರಿಕ್ಷಾದಲ್ಲಿ ಸಾಗಿ, ಆ ಬಳಿಕ ಅಲ್ಲಿ ಇಳಿಯುತ್ತಾನೆ. ಮತ್ತೂಂದು ರಿಕ್ಷಾವನ್ನೇರಿ ಜೆಪ್ಪು ವರೆಗೂ ಹೋಗಿದ್ದಾನೆ. ಅಲ್ಲಿ ರಿಕ್ಷಾದಿಂದ ಇಳಿದು ರೈಲ್ವೇ ಹಳಿಯತ್ತ ತೆರಳಿದ್ದಾನೆ. ಆ ಬಳಿಕ ಆತ ಎಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!