Thursday, June 4, 2026
Homeಕರಾವಳಿಉಡುಪಿಉಡುಪಿ: ‘ರೈಡ್ ಫಾರ್ ಹೆಲ್ತ್’: ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಚಾಲನೆ

ಉಡುಪಿ: ‘ರೈಡ್ ಫಾರ್ ಹೆಲ್ತ್’: ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಚಾಲನೆ

- Advertisement -
- Advertisement -

ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಣಿಪಾಲ, ವೈದ್ಯಕಿಯ ಪ್ರಕೋಷ್ಠ ಮತ್ತು ವಸಂತಿ ಎ ಪೈ ಪ್ರತಿಷ್ಠಾನ ಜಂಟಿಯಾಗಿ “ಆರೋಗ್ಯಕ್ಕಾಗಿ ಸವಾರಿ” ಸೈಕ್ಲೋಥಾನ್ ಹಮ್ಮಿಕೊಂಡಿದ್ದರು.

ಫೆ.27ರಂದು ಭಾನುವಾರ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತದ ಕಛೇರಿಯಲ್ಲಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೈಕ್ಲಾಥಾನ್‌ಗೆ ಚಾಲನೆಯನ್ನು ನೀಡಿದರು. ಸ್ವಾಮೀಜಿ ಸಹ ಸೈಕಲ್ ತುಳಿದು ಇತರ ಸೈಕ್ಲಿಸ್ಟ್ ಗಳನ್ನು ಬೆರಗುಗೊಳಿಸಿದರು.

ಈ ಸಂದರ್ಭದಲ್ಲಿ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತದ ಕಛೇರಿಯ ಡಿಜಿಎಂ ಪದ್ಮಾವತಿ, ಮಣಿಪಾಲದ ಡಾ.ಮಧುಸೂಧನ್ ಉಡುಪ, ಡಿಎಚ್‌ಒ, ಉಡುಪಿ ಉಪಸ್ಥಿತರಿದ್ದರು.

ಸ್ವಚ್ಛ ಭಾರತ್ ಅಭಿಯಾನ ಮತ್ತು ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು 110ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಮಣಿಪಾಲದಿಂದ ಮಲ್ಪೆಯ ಸೀ ವಾಕ್‌ಗೆ ಸೈಕಲ್ ಮೂಲಕ ತೆರಳಿದರು. ರಾಜ್ಯ ಪರಿಷತ್ತಿನ ಸದಸ್ಯ ಡಾ.ವಿಜಯೇಂದ್ರ ರಾವ್ ಭಾಗವಹಿಸಿದ್ದವರಿಗೆ ರಸಪ್ರಶ್ನೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಾ.ವಿದ್ಯಾಧರ ಶೆಟ್ಟಿ, ವೈದ್ಯ ಪ್ರಕೋಷ್ಠದ ಸಹ ಸಂಚಾಲಕ ಡಾ.ರಾಮಚಂದ್ರ ಕಾಮತ್, ಸಂಚಾಲಕ ಡಾ.ಜಗದೀಶ್ ಪೈ, ಭಾರತೀಯ ವಿಕಾಸ ಟ್ರಸ್ಟ್‌ನ ಇತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!