Thursday, May 2, 2024
Homeಕರಾವಳಿರಾಜ್ಯಾದ್ಯಂತ ಮಾಸಾಶನ ಕಾರ್ಯಕ್ರಮ: ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

ರಾಜ್ಯಾದ್ಯಂತ ಮಾಸಾಶನ ಕಾರ್ಯಕ್ರಮ: ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

spot_img
- Advertisement -
- Advertisement -

ದೇವದುರ್ಗ: ರಾಜ್ಯಾದ್ಯಂತ ಮಾಸಾಶನ ಕಾರ್ಯಕ್ರಮದ ಜೊತೆಗೆ 11ಸಾವಿರಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ಮಾದರಿಯಾದ ಗ್ರಾಮಾಭಿವೃದ್ಧಿ ಯೋಜನೆ.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವತಿಯಿಂದ ತಾಲೂಕಿನ ಗಬ್ಬೂರು ಗ್ರಾಮದ ವೃದ್ಧೆ ಕಸ್ತೂರಮ್ಮರವರಿಗೆ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ತಾಲೂಕಿನಾದ್ಯಂತ ಒಟ್ಟು 22 ನಿರ್ಗತಿಕ ಕುಟುಂಬದ ಫಲಾನುಭವಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ‌ ಯೋಜನೆಯ ರಾಯಚೂರು ಜಿಲ್ಲೆಯ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ಚಾಲನೆ ನೀಡಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಾ ಮುಂದೆ ಸಾಗುತ್ತಿರುವ ಸಂಸ್ಥೆಯು ಅನೇಕ ಬಗೆಯ ಸೇವೆಗಳನ್ನು ನೀಡುತ್ತಾ ಬರುತ್ತಿದ್ದು, ಇತ್ತೀಚಿಗೆ ರಾಜ್ಯದಾಧ್ಯಂತ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ 750 ರಿಂದ ಒಂದು ಸಾವಿರ ರೂಪಾಯಿಯವರಿಗೆ ಮಾಸಾಶನ ನೀಡಲಾಗುತ್ತದೆ ಎಂದು ಹೇಳಿದರು.

ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಸಂಸ್ಥೆಯು ಸಮಾಜದಲ್ಲಿ ಸರ್ವರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಈ ಬಾರಿ ಮಾಸಾಶನದೊಂದಿಗೆ ಈ ಬಾರಿ ಪಾತ್ರೆ, ತಲೆ ದಿಂಬು, ಹೊದಿಕೆ ಸೇರಿದಂತೆ ಮೂಲಭೂತ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಮಾಡುತ್ತಿದೆ ಎಂದರು.

ಈ ವಾತ್ಸಲ್ಯ ಕಿಟ್ ಮುಖಾಂತರ ರೋಗಿಗಳು , ನಿರ್ಗತಿಕರು, ಅಸಹಾಯಕರು, ವಿಧವೆಯರು ಹಾಗೂ ಬಡವರ ಕಷ್ಟ ಕಾರ್ಪಣ್ಯಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಅವರ ದು:ಖವನ್ನು ನಿವಾರಿಸಿ ಶಾಂತಿ , ನೆಮ್ಮದಿಯ ಜೀವನ ನಡೆಸುವಂತೆ ಅಭಯ ನೀಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯಾದ್ಯಾಂತ 255 ಕುಟುಂಬಗಳಿಗೆ, ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ವಿಭಾಗದಲ್ಲಿ 1336 ರಾಜ್ಯಾದಾಧ್ಯಂತ 11287 ವಾತ್ಸಲ್ಯ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ವಾತ್ಸಲ್ಯ ಕಿಟ್ಗಳನು ವಿತರಿಸಲಾಗುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇವದುರ್ಗದ ಗಬ್ಬೂರಿನ ಕಸ್ತೂರಮ್ಮ ರವರಿಗೆ ಮಂಜೂರಾದ ವಾತ್ಸಲ್ಯ ಕಿಟ್ ನ್ನು ವಿತರಿಸಲಾಯಿತು.

ಈ ಸಂದರ್ಭ ದೇವದುರ್ಗ ತಾಲೂಕಿನ ಯೋಜನಾಧಿಕಾರಿ ರಾಜೇಶ್.ಎಂ , ಯುವ ಬ್ರಿಗೇಡ್ ಸಂಚಾಲಕ ಚನ್ನು ಚಿಕ್ಕಮಠ , ನಾಗರಾಜ್, ವೀರೇಶ್ , ಗ್ರಾಮ ಪಂಚಾಯತ್ ಸದಸ್ಯ ಮಹಿಬೊಬ್ ಅಲಿ, ಅಮರಗುಂಡಪ್ಪ ಮೇಲ್ವಿಚಾರಕ ರಾಮು, ಸೇವಾಪ್ರತಿನಿಧಿಗಳು ಮುಂತಾದವರು ಉಪಸ್ಧಿತರಿದ್ದರು.

- Advertisement -
spot_img

Latest News

error: Content is protected !!