Sunday, May 5, 2024
HomeUncategorizedಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ; 90 ನಿಮಿಷದಲ್ಲಿ ಅಂತರಿಕ್ಷಕ್ಕೆ ಹೋಗಿ ಮರಳಿದ ರಿಚರ್ಡ್...

ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ; 90 ನಿಮಿಷದಲ್ಲಿ ಅಂತರಿಕ್ಷಕ್ಕೆ ಹೋಗಿ ಮರಳಿದ ರಿಚರ್ಡ್ ಬ್ರ್ಯಾನ್ಸನ್

spot_img
- Advertisement -
- Advertisement -

ವಾಷಿಂಗ್ಟನ್: ಖ್ಯಾತ ಬಿಲಿಯನೇರ್ ಉದ್ಯಮಿ ರಿಚರ್ಡ್ ಬ್ರ್ಯಾನ್ಸನ್ ಅವರು ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದಿದ್ದು, ತಮ್ಮ ವರ್ಜಿನ್ ಗ್ಯಾಲೆಕ್ಟಿಕ್ ಬಾಹ್ಯಾಕಾಶ ಪ್ರವಾಸ ಕಂಪನಿ ಮೂಲಕ ಬಾಹ್ಯಾಕಾಶ ಪ್ರವಾಸವನ್ನು ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

71 ವರ್ಷದ ಬ್ರ್ಯಾನ್ಸನ್ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಉದ್ಯಮಿಯಾಗಿದ್ದು, ಭಾರತೀಯ ಮೂಲದ ಶಿರಿಶಾ ಬಾಂಡ್ಲಾ ಸೇರಿದಂತೆ 6 ಜನರು ಬಾಹ್ಯಾಕಾಶದಲ್ಲಿ ಸುತ್ತಿ ಮರಳಿ ಭೂಮಿಗೆ ಬಂದಿಳಿದಿದ್ದಾರೆ.

ಇದರೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆಯಲಾಗಿದ್ದು, ಉಡಾವಣೆಯಾದ ಸಮಯದಿಂದ 90 ನಿಮಿಷದೊಳಗೆ ಈ ನೌಕೆ ಭೂಮಿಗೆ ಮರಳಿದೆ.

ಶಿರಿಶಾ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಮೂಲದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು,ಈ ಹಿಂದೆ 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ, ನಂತರ ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಸ್ವಂತ ವಾಹನದಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲಿಗ ಎಂಬ ದಾಖಲೆಯೂ ಬ್ರಾನ್ಸನ್‌ಗೆ ಒಲಿದುಬಂದಿದೆ.

ನೌಕೆಯು ಭೂಮಿಯಿಂದ 3 ಲಕ್ಷ ಅಡಿಗಳ ಎತ್ತರ ತಲುಪಿದ ಬಳಿಕ ಬ್ರಾನ್ಸನ್‌, ಶಿರಿಶಾ ಸೇರಿ ಎಲ್ಲ 6 ಮಂದಿ ಯಾತ್ರಿಕರು 4 ನಿಮಿಷಗಳ ಕಾಲ ನಿರ್ವಾತದ ಅನುಭವ ಪಡೆದು ಆನಂದ ಪುಳಕಿತರಾದರು. ಬಳಿಕ ವಿಎಸ್‌ಎಸ್‌ ಯುನಿಟ್‌ ನೌಕೆಯ ಮೂಲಕವೇ ಎಲ್ಲಾ ಆರು ಜನರು ಭೂಮಿಗೆ ಹಿಂದಿರುಗಿದರು. ಒಟ್ಟು 90 ನಿಮಿಷಗಳಲ್ಲಿ ಈ ಯಾನ ಮುಕ್ತಾಯಗೊಂಡಿತು. ವಿಮಾನ ಭೂಸ್ಪರ್ಶ ಮಾಡುತ್ತಲೇ ಬ್ರಾನ್ಸನ್‌ ಸೇರಿದಂತೆ ವಿಮಾನದಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ವರ್ಜಿನ್ ಗ್ಯಾಲೆಕ್ಟಿಕ್ ಮೂಲಕ ಯಶಸ್ವಿಯಾಗಿ ಯಾನ ಪೂರೈಸಿದ ರಿಚರ್ಡ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ವರ್ಜಿನ್ ಗ್ಯಾಲೆಕ್ಟಿನ್‌ನ ನಮ್ಮ ತಂಡಕ್ಕೆ ಅಭಿನಂದನೆಗಳು, 17 ವರ್ಷಗಳ ಕಠಿಣ ಪರಿಶ್ರಮದಿಂದ ನಾವು ಈವರೆಗೆ ತಲುಪಿದ್ದೇವೆ” ಎಂದು ರಿಚರ್ಡ್ ಹೇಳಿದ್ದಾರೆ

- Advertisement -
spot_img

Latest News

error: Content is protected !!