- Advertisement -
![]()
- Advertisement -
ಉಡುಪಿ: ಕಾಪು ತಾಲೂಕಿನ ಮೂಳೂರಿನಲ್ಲಿ ಕಡಲು ಕೊರೆತಕ್ಕೆ ಒಳಗಾಗಿದ್ದ ಪ್ರದೇಶಕ್ಕೆ ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗರಡಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ ಫಲಾನುಭವಿಗಳಿಗೆ ಸ್ಥಳದಲ್ಲೇ 1.20 ಲಕ್ಷ ರೂಪಾಯಿ ಪರಿಹಾರದ ಪ್ರಮಾಣ ಪತ್ರ ನೀಡಿ ದೇವರಾಜ ಅರಸು ಯೋಜನೆಯಲ್ಲಿ ಹೊಸ ಮನೆ ನೀಡುವ ಕುರಿತು ಭರವಸೆ ನೀಡಿದರು.
ಫಲಾನುಭವಿಗಳಿಗೆ ಪರಿಹಾರ ಹಣ ನೀಡುವ ಜೊತೆಗೆ ವಸತಿ ಯೋಜನೆಯ ಅಡಿ ಹೊಸ ಮನೆಯನ್ನೂ ಜಿಲ್ಲಾಡಳಿತ ನಿರ್ಮಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಕಂದಾಯ ಸಚಿವರು, ಜೀವಹಾನಿ ತಡೆಯುವಂತೆಯೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಶಿಫಾರಸಿನ ಆಧಾರದಲ್ಲಿ 300 ಕೋಟಿ ರೂಪಾಯಿ ಮೌಲ್ಯದಲ್ಲಿ ಕಡಲ್ಕೊರೆತ ತಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ
- Advertisement -


