ಬೆಂಗಳೂರು : ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.ಪ್ರಜ್ವಲ್ ಅವರು ಅರೆಸ್ಟ್ ಆಗಿ ಈಗಾಗಲೇ 1 ತಿಂಗಳು ಕಳೆದಿದೆ. ಇದುವರೆಗೂ ಅವರ ಕುಟುಂಬಸ್ಥರು ಯಾರೂ ಕೂಡ ಪ್ರಜ್ವಲ್ ಅವರನ್ನು ಭೇಟಿಯಾಗಿರಲಿಲ್ಲ. ಸೋಮವಾರ ಅಂದ್ರೆ ಜುಲೈ 1 ರಂದು ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಪ್ರಜ್ವಲ್ ಅವರನ್ನು ಭೇಟಿ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ರೇವಣ್ಣ ಅವರು ಪ್ರಜ್ವಲ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಸುಮಾರು 30 ನಿಮಿಷಗಳ ಕಾಲ ಅವರು ಪ್ರಜ್ವಲ್ ಜೊತೆ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಜುಲೈ 1ರಂದು ತಾಯಿ ಭವಾನಿ, ಪ್ರಜ್ವಲ್ ಭೇಟಿಯಾಗಿ ತೆರಳಿದ್ದರು. ಅದರ ಬೆನ್ನಲ್ಲೇ ಇದೀಗ ತಂದೆ ಆಗಮಿಸಿದ್ದಾರೆ.
ಇನ್ನು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರು ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಷೇನ್ಸ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕೃರಿಸಿದ ಬೆನ್ನಲ್ಲೆ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.