Wednesday, June 3, 2026
Homeಕರಾವಳಿಸುಬ್ರಮಣ್ಯದಲ್ಲಿ ಸ್ಕೂಟಿಗೆ ಕಾರು ಡಿಕ್ಕಿ : ನಿವೃತ್ತ ಎಎಸ್ ಐ ಸಾವು

ಸುಬ್ರಮಣ್ಯದಲ್ಲಿ ಸ್ಕೂಟಿಗೆ ಕಾರು ಡಿಕ್ಕಿ : ನಿವೃತ್ತ ಎಎಸ್ ಐ ಸಾವು

- Advertisement -
- Advertisement -

ಸುಬ್ರಮಣ್ಯ ; ಚಲಿಸುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿ ನಿವೃತ್ತ ಎಎಸ್ ಐ ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

ನಿವೃತ್ತ ಎಎಸ್ ಐ ಪೆರ್ಗಡೆ ಗೌಡ ಮೃತ ದುರ್ದೈವಿ. ಪೆರ್ಗಡೆ ಗೌಡ ಅವರು ವಲ್ಲೀಶ ಸಭಾಭವನದ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಅವರ ಸ್ಕೂಟಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ.ಪರಿಣಾಮ ಅವರ ತಲೆ ಸೇರಿದಂತೆ ಇತರೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!