- Advertisement -
- Advertisement -
ನವದೆಹಲಿ : ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 3ರವರೆಗೆ ಲಾಕ್ ಡೌನ್ ಘೋಷಿಸಿದೆ. ಇದೀಗ ಲಾಕ್ ಡೌನ್ ಮುಗಿಯುವವರೆಗೆ ಕಟ್ಟಿಂಗ್ ಶಾಪ್ ತೆರೆಯಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೇಂದ್ರ ಸರಕಾರ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿ ಘೋಷಿಸಿದೆ. ಆದರೆ ಕೆಲವು ಗೊಂದಲಗಳಿದ್ದು ಇದಕ್ಕೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು ಹೇರ್ ಕಟಿಂಗ್ ಸಲೂನ್ ಮತ್ತು ಎಲ್ಲ ರೆಸ್ಟೋರೆಂಟ್‌ಗಳು ಮೇ 3ರವರೆಗೆ ಬಂದ್ ಆಗಿರುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಂಗಡಿಗಳು ಹಾಗೂ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿರುವ ಕೆಲ ನಿರ್ದಿಷ್ಟ ವರ್ಗದ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ಕಲ್ಪಿಸಿದೆ.
- Advertisement -