Tuesday, September 17, 2024
Homeತಾಜಾ ಸುದ್ದಿಬಡವರ ಹಸಿವಿಗೆ ಮಿಡಿದ ಬೆಳ್ತಂಗಡಿಯ ವಿವೋ ತಂಡ

ಬಡವರ ಹಸಿವಿಗೆ ಮಿಡಿದ ಬೆಳ್ತಂಗಡಿಯ ವಿವೋ ತಂಡ

spot_img
- Advertisement -
- Advertisement -

ಬೆಳ್ತಂಗಡಿ: ಇಡೀ ದೇಶವೇ ಕೊರೊನಾ ಲಾಕ್ ಡೌನ್ ಗೆ ಸ್ತಬ್ದವಾಗಿದೆ. ಕೆಲಸ ಇಲ್ಲದೆ ಕೆಲವರೆಲ್ಲ ಸಂಕಷ್ಟದಲ್ಲಿದ್ದಾರೆ.ಕೆಲಸ ಇದ್ದರೆ ಒಂದು ಹೊತ್ತಿನ ಊಟ ಎನ್ನುವ ಜನರು ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಬೆಳ್ತಂಗಡಿಯ ವಿವೋ ಮೊಬೈಲ್ ಮಾರಾಟ ಪ್ರತಿನಿಧಿಗಳು ಸೇರಿ ತಮ್ಮ ಸಂಬಳದ ಸ್ವಲ್ಪ ಹಣದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ತಯಾರಿಸಿ ತಾಲೂಕಿನ ವಿವಿದ ಕಡೆ ಬಡ ಕುಟುಂಬಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಕೊಟ್ಟು ಬಂದಿದ್ದಾರೆ.ಯಾವುದೇ ಕಾರಣಕ್ಕೂ ಕಿಟ್ ವಿತರಿಸುವಾಗ ಪೋಟೋ ತೆಗೆಯದೇ ಜನರ ಸ್ವಾಭಿಮಾನಕ್ಕೆ ಬೆಲೆ ನೀಡಿದ್ದಾರೆ. ನಮ್ಮ ವಿವೋ ಟೀಂ ನ 14 ಸದಸ್ಯರು ಸೇರಿ ಬಡ ಜನರಿಗೆ ಕಿಟ್ ನೀಡುವ ತಿರ್ಮಾನ ತೆಗೆದುಕೊಂಡೆವು ಅದರಂತೆ ಎಲ್ಲರೂ ಸಂತೋಷದಿಂದ ತಮ್ಮ ತಮ್ಮ ಸಂಬಳದಿಂದ ಹಣವನ್ನು ನೀಡಿದ್ದಾರೆ ಒಳ್ಳೆಯ ರೀತಿ ಆಹಾರ ಸಾಮಾಗ್ರಿಗಳ ಕೆಲವು ಕಿಟ್ ಗಳನ್ನು ತಯಾರಿಸಿ ತಾಲೂಕಿನ ಕೆಲವು ತುಂಬಾ ಬಡ ಜನರಿಗೆ ಆಯ್ಕೆ ಮಾಡಿ ನೀಡಿದ್ದೇವೆ.ಕಿಟ್ ನೀಡಿದ ಟೀಂ ನ ಯಾರೂ ಕೂಡ ಶ್ರೀಮಂತರಲ್ಲ ಹಸಿವಿನ ನೋವು ಗೊತ್ತಿದ್ದವರು ಅದ್ದರಿಂದ ಎಲ್ಲರೂ ಸಂತೋಷದಿಂದ ತಮ್ಮ ಪಾಲನ್ನು ನೀಡಿ ಸಹಕರಿಸಿದ್ದಾರೆ ಮುಂದಿನ ತಿಂಗಳಲ್ಲೂ ಸಂಬಳ ಬಂದ ಕೂಡಲೇ ಕೆಲವು ಬಡ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಟೀಂ ಲೀಡರ್ ಗೋಪಾಲ್ ಕೃಷ್ಣ.ನಿಜಕ್ಕೂ ಇವರ ಈ ಚಿಕ್ಕ ಸೇವೆ ಇತರರಿಗೂ ಮಾದರಿಯಾಗಲಿ.

- Advertisement -
spot_img

Latest News

error: Content is protected !!