Tuesday, May 7, 2024
Homeಕರಾವಳಿಉಡುಪಿಉಡುಪಿ: ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ: ಅಗ್ನಿವೀರರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಾತಿ: ಸಚಿವ...

ಉಡುಪಿ: ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ: ಅಗ್ನಿವೀರರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಾತಿ: ಸಚಿವ ಕೋಟ ಶ್ರೀನಿವಾಸ್‌ ಹೇಳಿಕೆ

spot_img
- Advertisement -
- Advertisement -

ಉಡುಪಿ: ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ ನೀಡಲಾಗುತ್ತಿದ್ದು, ಅಗ್ನಿ ವೀರರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಅಗ್ನಿ ಪಥಕ್ಕೆ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದಾರೆ. ದೇಶದಲ್ಲಿ ಅಗ್ನಿ ವೀರರು ಕೂಡ ಸೃಷ್ಟಿಯಾಗುತ್ತಿದ್ದಾರೆ.  ಅಗ್ನಿ ವೀರರಿಗೆ ದೈಹಿಕ ಶಿಕ್ಷಕ ಹುದ್ದೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರಕ್ಕೆ ಟಿಪ್ಪಣಿ ಕೊಟ್ಟಿದ್ದೇನೆ. ಶೇಕಡ 75ರಷ್ಟು ಅಗ್ನಿವೀರರಿಗೆ ಮೀಸಲಿಡುವ ಯೋಚನೆ ಇದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೀಸಲಾತಿಗೆ ಚಿಂತನೆ ಇದೆ ಎಂದ ಅವರು,ಇತರೆ ಹುದ್ದೆಗಳಲ್ಲೂ ಆದ್ಯತೆ ನೀಡುವ ಯೋಚನೆ ಇದೆ. ಕಡತವನ್ನು ಮಂಡಿಸಲು ಈಗಾಗಲೇ ಟಿಪ್ಪಣಿ ಕೊಡಲಾಗಿದೆ.ಈ ಯೋಜನೆಯನ್ನು ಜಾರಿ ಮಾಡುತ್ತೇವೆ.ಮತ್ತು ವಾರ್ಡನ್ ಹುದ್ದೆಯಲ್ಲೂ ಅಗ್ನಿ ವೀರರಿಗೆ ಅವಕಾಶ ನೀಡಲು ಯೋಚಿಸಲಾಗಿದೆ ಎಂದರು.

- Advertisement -
spot_img

Latest News

error: Content is protected !!