Saturday, June 13, 2026
Homeಪ್ರಮುಖ-ಸುದ್ದಿಕೊಡಗಿನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 3 ತಿಂಗಳ ಮಗುವಿನ ರಕ್ಷಣೆ, ಹೇಗೆ ನಡೀತು ಗೊತ್ತಾ ಕಾರ್ಯಾಚರಣೆ..

ಕೊಡಗಿನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 3 ತಿಂಗಳ ಮಗುವಿನ ರಕ್ಷಣೆ, ಹೇಗೆ ನಡೀತು ಗೊತ್ತಾ ಕಾರ್ಯಾಚರಣೆ..

- Advertisement -
- Advertisement -

ಮಡಿಕೇರಿ: ಕೊಡಗಿನಲ್ಲಿ ಪ್ರವಾಹದಲ್ಲಿ ಹಲವು ಗ್ರಾಮಗಳು ಮುಳುಗಿದ್ದು, ಬಾಳೆಗುಂಡಿಯ ಮನೆಯೊಂದರ ಸುತ್ತಲೂ ಪ್ರವಾಹ ಆವರಿಸಿತ್ತು. ರಕ್ಷಣಾ ತಂಡದವರು ಎರಡು ಬದಿಯ ಮರಕ್ಕೆ ಹಗ್ಗ ಕಟ್ಟಿ ಮೂರು ತಿಂಗಳ ಮಗು ಸೇರಿದಂತೆ ಎರಡು ಕುಟುಂಬಗಳ ಜನರನ್ನು ರಕ್ಷಣೆ ಮಾಡಿದ್ದಾರೆ.

ಚೆರಿಯಪರಂಬು, ಕೊಂಡಂಗೇರಿ ಗ್ರಾಮದಲ್ಲಿ ಪ್ರವಾಹದಿಂದ ಮನೆಯ ಮಹಡಿ ಮೇಲಿದ್ದ ಜನರನ್ನು ರಕ್ಷಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ ರಕ್ಷಣಾ ತಂಡ ಆಗಮಿಸಿದೆ. ಇನ್ನು ಪ್ರವಾಹ ಹಾಗೂ ಗುಡ್ಡ ಕುಸಿತದ ಪ್ರದೇಶದಲ್ಲಿದ್ದ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

- Advertisement -

Latest News

error: Content is protected !!