Monday, June 8, 2026
Homeಕರಾವಳಿಬೆಳ್ತಂಗಡಿ: ಎರಡು ಪಂಚಾಯತ್ ನ ಪಿಡಿಓಯೊಬ್ಬರಿಗೆ ಕೊರೊನಾ, ಪಂಚಾಯತ್ ಸೀಲ್ ಡೌನ್!

ಬೆಳ್ತಂಗಡಿ: ಎರಡು ಪಂಚಾಯತ್ ನ ಪಿಡಿಓಯೊಬ್ಬರಿಗೆ ಕೊರೊನಾ, ಪಂಚಾಯತ್ ಸೀಲ್ ಡೌನ್!

- Advertisement -
- Advertisement -

ಬೆಳ್ತಂಗಡಿ: ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ಎಂಥೆಂತಹ ಪರಿಸ್ಥಿತಿಗಳನ್ನು ತಂದೊಡ್ಡಿದೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ದೇಶದ ಚಿತ್ರಣ ಊಹಿಸದಷ್ಟು ಬದಲಾಗಿದೆ. ಒಬ್ಬೊಬ್ಬರದ್ದು ಒಂದು ರೀತಿಯ ಕಷ್ಟ ಎಂಬಂತಾಗಿದೆ. ಅದರಲ್ಲೂ ಸರ್ಕಾರಿ ಉದ್ಯೋಗಗಳಲ್ಲಿ ಇರುವವರ ಪಾಡು ದೇವರಿಗೇ ಪ್ರೀತಿ.

ಇದೀಗ ಬೆಳ್ತಂಗಡಿ ತಾಲೂಕಿನಲ್ಲಿರುವ ಪಿಡಿಓ ಒಬ್ಬರದು ಅದೇ ಕಥೆ. ತಣ್ಣಿರುಪಂತ ಮತ್ತು ಮಚ್ಚಿನ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಮತ್ತು ಪಂಚಾಯತ್ ನ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಕಂಡು ಬಂದ ಹಿನ್ನಲೆಯಲ್ಲಿ ತಣ್ಣಿರುಪಂತ ಮತ್ತು ಮಚ್ಚಿನ ಗ್ರಾ.ಪಂನ್ನು ಸ್ಯಾನಿಟೈಸರ್ ಮಾಡಿ ಸೀಲ್ ಡೌನ್ ಮಾಡಲಾಗಿದೆ.

ಆ.7 ರಂದು ತಣ್ಣೀರುಪಂತದಲ್ಲಿ ನಡೆದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಲ್ಲಿ ಇವರಿಬ್ಬರು ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಪಾಸಿಟೀವ್ ಆಗಿ ಬಂದಿದೆ. ಇದರಿಂದಾಗಿ ಪಿಡಿಒ ಕೆಲಸ ಮಾಡುತ್ತಿದ್ದ ಎರಡು ಪಂಚಾಯತುಗಳನ್ನು ಸ್ಯಾನಿಟೈಸರ್ ಮಾಡಿ ಸೋಮವಾರದ ವರೆಗೆ ಸೀಲ್‍ಡೌನ್ ಮಾಡಲಾಗಿದೆ.

- Advertisement -

Latest News

error: Content is protected !!