Sunday, June 7, 2026
Homeಕರಾವಳಿಮಲ್ಪೆ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ!

ಮಲ್ಪೆ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ!

- Advertisement -
- Advertisement -

ಮಲ್ಪೆ: ಸಮುದ್ರದಲ್ಲಿ ಆಡುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತಿದ್ದ ಮೂವರನ್ನು ಮಲ್ಪೆಯ ಜೀವರಕ್ಷಕ ತಂಡದ ಸದಸ್ಯರು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದ ಘಟನೆ ವರದಿಯಾಗಿದೆ.

ಕೊಪ್ಪಳ ಜಿಲ್ಲೆ ಬನಕಟ್ಟಿ ಗ್ರಾಮದ ಮೂವರು ಪ್ರವಾಸಿಗರು ಉಡುಪಿಗೆ ಪ್ರವಾಸಕ್ಕೆಂದು ಬಂದಿದ್ದು, ಗುರುವಾರ ಸುಮಾರು ಸಂಜೆ 5:20ಕ್ಕೆ ಮಲ್ಪೆಯ ಸಮುದ್ರದಲ್ಲಿ ಇಳಿದು ಆಡುತ್ತಿದ್ದರು.ಈ ವೇಳೆಯಲ್ಲಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ರಕ್ಷಣೆಗೆ ಧುಮುಕಿದ ಮಲ್ಪೆ ಲೈಫ್‌ಗಾರ್ಡ್ ಸದಸ್ಯರು ಪವನ್ ಮಡಿಲಾ (21), ಚೇತನ (19) ಹಾಗೂ ಪ್ರಿಯದರ್ಶಿನಿ (20) ಇವರನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದರು.

- Advertisement -

Latest News

error: Content is protected !!