Monday, June 8, 2026
Homeಕರಾವಳಿಶಿರಾಡಿ ಘಾಟ್‌ ರಸ್ತೆ ದುರಸ್ತಿಗಾಗಿ ಉದ್ಯಮಿಗಳ ಮನವಿ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಪತ್ರ

ಶಿರಾಡಿ ಘಾಟ್‌ ರಸ್ತೆ ದುರಸ್ತಿಗಾಗಿ ಉದ್ಯಮಿಗಳ ಮನವಿ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಪತ್ರ

- Advertisement -
- Advertisement -

ಮಂಗಳೂರು: ಶಿರಾಡಿ ಘಾಟ್‌ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಂಘಟನೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಬಳಿ ಮನವಿ ಸಲ್ಲಿಸಿದ್ದಾರೆ.

ವಿರೇಂದ್ರ ಹೆಗ್ಗಡೆಯವರಿಗೆ ಪತ್ರದ ಮೂಲಕ ಮನವಿ ಮಾಡಿರುವ ಸಂಘಟನೆ, ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಹೆದ್ದಾರಿ ದುರಸ್ತಿಗೆ ಕೇಳಿಕೊಂಡಿದ್ದಾರೆ. ಹಾಸನ-ಸಕಲೇಶಪುರ-ದೋಣಿಗಲ್-ಮಾರಣಹಳ್ಳಿ ರಸ್ತೆಯನ್ನು ಚತುಷ್ಪಥ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಮಾರಣಹಳ್ಳಿಯಿಂದ ಅಡ್ಡಹೊಳೆವರೆಗಿನ ಘಾಟ್ ರಸ್ತೆ, ಅಡ್ಡಹೊಳೆಯಿಂದ ಬಿ.ಸಿ.ರೋಡ್‍ವರೆಗಿನ ವ್ಯವಸ್ಥಿತ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಮುಗಿಸುವಂತೆ ಕೇಳಿಕೊಂಡಿದ್ದಾರೆ.

- Advertisement -

Latest News

error: Content is protected !!