Wednesday, June 24, 2026
Homeತಾಜಾ ಸುದ್ದಿಸುಪ್ರೀಂ ಕೋರ್ಟ್ ತೀರ್ಪು ಕಾನೂನಿನ ಮುಂದೆ ಎಲ್ಲರೂ ಒಂದೇ ಅಂತಾ ತೋರಿಸಿದೆ: ಕೊಲೆಯಾದ ರೇಣುಕಾಸ್ವಾಮಿ ತಂದೆ...

ಸುಪ್ರೀಂ ಕೋರ್ಟ್ ತೀರ್ಪು ಕಾನೂನಿನ ಮುಂದೆ ಎಲ್ಲರೂ ಒಂದೇ ಅಂತಾ ತೋರಿಸಿದೆ: ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಪ್ರತಿಕ್ರಿಯೆ

- Advertisement -
- Advertisement -

ಚಿತ್ರದುರ್ಗ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಟ ದರ್ಶನ್ ಅವ್ರಿಗೆ ಜಾಮೀನು ರದ್ದು ಮಾಡಿರುವ ಬಗ್ಗೆ ಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಪ್ರತಿಕ್ರಿಯಿಸಿದ್ದು ಇದರಿಂದಾಗಿ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್ಗೆ ಅಪೀಲ್ ಮಾಡಿತ್ತು. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಈ ತೀರ್ಪು ಬಂದಿದೆ.ಸರ್ಕಾರ & ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆ ಎಂದಿದ್ದಾರೆ.

ಈ ಕೇಸ್ ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ರೇಣುಕಾಸ್ವಾಮಿ ಪತ್ನಿ ನನ್ನನೊಂದ ಸೊಸೆ ಸಹnaa ಅವರಿಗೆ ಉದ್ಯೋಗ ನೀಡಬೇಕು. ಕೆಳ ಹಂತದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಆಗಬೇಕು ಎಂದು ಅಗ್ರಹಿಸಿದ್ದಾರೆ. ಯಾರೇ ದೊಡ್ಡವರು ಆದರೂ ಕಾನೂನು ಒಂದೇ ಎಂದು ಸಾಬೀತು ಆಗಿದೆ.
ನಮಗೆ ಈ ಪ್ರಕರಣದಲ್ಲಿ ತುಂಭಾ ಆತಂಕ ಇತ್ತು, ಸುಪ್ರೀಂ ಕೋರ್ಟ್ ನಿರ್ಧಾರ ವಿಶ್ವಾಸ ಬಂದಿದೆ.
ನಾನು ಪೂಜೆ ಮಾಡುವ ವೇಳೆ ನನ್ನ ಪತ್ನಿ ಬೇಲ್ ವಜಾ ಆಗಿದೆ ಎಂದರು. ನಮ್ಮ ಮನೆಯ ಪೂಜೆ ಸಲ್ಲಿಕೆ ವೇಳೆ ಅರ್ಜಿ ವಜಾ ಆಗಿತ್ತು. ಗುರುಗಳು, ದೇವರ ಆಶಿರ್ವಾದದಿಂದ ಬೇಲ್ ಅರ್ಜಿ ವಜಾ ಆಗಿದೆ ಎಂದಿದ್ದಾರೆ.ಎಲ್ಲಾ ಮಾಧ್ಯಮಗಳಿಗೂ ನಾನು ಧನ್ಯವಾದ ತಿಳಿಸಿದ್ದಾರೆ.

- Advertisement -

Latest News

error: Content is protected !!