Thursday, June 4, 2026
Homeತಾಜಾ ಸುದ್ದಿಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪುತ್ರನ ನಾಮಕರಣ ಸಮಾರಂಭ

ಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪುತ್ರನ ನಾಮಕರಣ ಸಮಾರಂಭ

- Advertisement -
- Advertisement -

ಚಿತ್ರದುರ್ಗ: ಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪುತ್ರನ ನಾಮಕರಣ ಸಮಾರಂಭ ಇಂದು ನಡೆಯಿತು.ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿರುವ ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ ನಾಮಕರಣ ನಡೆಯಿತು. ಇನ್ನೂ ರೇಣುಕಾಸ್ವಾಮಿ ಪತ್ನಿ ಸಹನ ಗಂಡು ಮಗುವಿಗೆ ಜನ್ಮ ನೀಡಿ ಐದು ತಿಂಗಳ ಬಳಿಕ ನಾಮಕರಣ ಕಾರ್ಯಕ್ರಮ ನೆರವೇರಿದೆ. ಮಗುವಿಗೆ ಶಶಿಧರ್ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ.

ರೇಣುಕಾಸ್ವಾಮಿ ತಂಗಿ ಸಚೇತ  ಅಳಿಯನ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮತಕರಣ ಮಾಡಿದರು. ಈ ವೇಳೆ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಹಾಗೂ ತಾಯಿ ರತ್ನಪ್ರಭಾ ಇಬ್ಬರು ಮೊಮ್ಮಗನನ್ನು ಮುದ್ದಾಡಿದ್ರು. ನಾಮಕರಣ ಕಾರ್ಯಕ್ರಮಕ್ಕೆ ಸಂಬಂಧಿಕರು ಕೂಡಾ ಸಾಕ್ಷಿಯಾದರು.

- Advertisement -

Latest News

error: Content is protected !!