Thursday, June 4, 2026
Homeಕರಾವಳಿಇಡಿ ಅಧಿಕಾರಿಗಳ ಹೆಸರಿನಲ್ಲಿ ದರೋಡೆ ದಾಳಿ ಪ್ರಕರಣ; ಕಳ್ಳರಿಗೆ 1ಕೋಟಿ ರೂ. ದರೋಡೆ ಮುಚ್ಚಿಡಲು 3 ಕೋಟಿ ಇನಾಮು!

ಇಡಿ ಅಧಿಕಾರಿಗಳ ಹೆಸರಿನಲ್ಲಿ ದರೋಡೆ ದಾಳಿ ಪ್ರಕರಣ; ಕಳ್ಳರಿಗೆ 1ಕೋಟಿ ರೂ. ದರೋಡೆ ಮುಚ್ಚಿಡಲು 3 ಕೋಟಿ ಇನಾಮು!

- Advertisement -
- Advertisement -

ಬಂಟ್ವಾಳ: ಬೋಳಂತೂರಿನ ನಾರ್ಶದ ಬೀಡಿ ಉದ್ಯಮಿ ಸುಲೈಮಾನ್‌ ಅವರ ಮನೆಗೆ ಇ.ಡಿ. ಅಧಿಕಾರಿಗಳಂತೆ ದರೋಡೆಕೋರರು ದಾಳಿ ನಡೆಸಿ ಸುಮಾರು 1 ಕೋ.ರೂ.ನಷ್ಟು ಹಣವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಶೇಷ ತಿರುವು ಸಿಕ್ಕಿದೆ. 

ದರೋಡೆ ನಡೆಸಲು ಬಂದಿದ್ದ ಖದೀಮರಿಗೇ ದರೋಡೆಯ ವಿಚಾರವನ್ನು ಬಹಿರಂಗಗೊಳಿಸದಂತೆ ಮೂರು ಪಟ್ಟು ಇನಾಮು ಕೊಟ್ಟ ವಿಶೇಷವಾದ ಅಂಶಗಳು ಬೆಳಕಿಗೆ ಬರುತ್ತಿವೆ.

ಇ.ಡಿ. ಅಧಿಕಾರಿ ಗಳಂತೆ ದರೋಡೆಕೋರರು ನಟಿಸಿ ದಾಳಿ ಮಾಡಿದಾಗ ಮನೆಯಲ್ಲಿ ಸುಮಾರು 1 ಕೋ.ರೂ.ನಷ್ಟು ಹಣ ಸಿಕ್ಕಿದೆ. ಈ ಸಂದರ್ಭದಲ್ಲಿ ದಾಳಿಗೆ ಹೆದರಿದ ಉದ್ಯಮಿ ಇನ್ನು ತನಿಖೆ, ವಿಚಾರಣೆ ಅಂತ ಕಾನೂನು ತೊಡಕು ಎದುರಾಗುವುದು ಬೇಡ ಎಂದು ಮನೆಯೊಳಗೆ ಗೋಣಿ ಚೀಲದಲ್ಲಿ ತುಂಬಿರಿಸಿದ್ದ ಹಣವನ್ನೂ ತಂದು ಕೊಟ್ಟು, ಪ್ರಕರಣವನ್ನು ಇಲ್ಲಿಗೇ ಮುಗಿಸಿಬಿಡಿ ಎಂಬುದಾಗಿ ಹೇಳಿದ್ದಾಗಿ ತಿಳಿದುಬಂದಿದೆ. ಈ ಗೋಣಿ ಚೀಲದಲ್ಲಿ 3 ಕೋ.ರೂ.ಗೂ ಹೆಚ್ಚು ಹಣವಿತ್ತು ಎನ್ನಲಾಗುತ್ತಿದೆ. 

- Advertisement -

Latest News

error: Content is protected !!