- Advertisement -
- Advertisement -
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಅವರ ಗನ್ ಲೈಸೆನ್ಸ್ ಅನ್ನು ರದ್ದು ಪಡಿಸುವುದಾಗಿ ಬೆಂಗಳೂರು ಪೊಲೀಸರು ನೊಟೀಸ್ ಕಳುಹಿಸಿದ್ದು, ಇದೀಗ ನಟ ತನ್ನ ಆತ್ಮರಕ್ಷಣೆಗಾಗಿ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಟ ದರ್ಶನ್ ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಗನ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದ್ದು, ಹೀಗಾಗಿ ನಿಮ್ಮ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ 7ರಂದು ದರ್ಶನ್ ಗೆ ಪೊಲೀಸರು ನೋಟೀಸೊಂದನ್ನು ನೀಡಿದ್ದರು.
- Advertisement -