Sunday, May 19, 2024
Homeಕರಾವಳಿಸವಣಾಲು: ಶೀಘ್ರದಲ್ಲಿ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಜೀರ್ಣೋದ್ಧಾರ ಪ್ರಾರಂಭ!

ಸವಣಾಲು: ಶೀಘ್ರದಲ್ಲಿ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಜೀರ್ಣೋದ್ಧಾರ ಪ್ರಾರಂಭ!

spot_img
- Advertisement -
- Advertisement -

ಸವಣಾಲು: ನೂತನ ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್‌ನ ಮೂಲಕ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಜೀರ್ಣೋದ್ಧಾರ ಮಾಡಲು ಮುನ್ನುಡಿ ಹಾಕಲಾಗಿದ್ದು ಶೀಘ್ರದಲ್ಲಿ ಜೀರ್ಣೋದ್ಧಾರ ಪ್ರಾರಂಭಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಮತ್ತು ಕಾರ್ಯದರ್ಶಿ ಜಯಾನಂದ ಪಿ. ಪಿಲಿಕಲ ಹೇಳಿದರು.

ಜೂಲೈ 31 ರಂದು ದೇವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುಮಾರು 700 ವರ್ಷಗಳ ಹಿಂದೆ ಬಂಡೆ ಕಲ್ಲಿನ ಮೇಲೆ ನೆಲೆ ನಿಂತಿರುವ ಕ್ಷೇತ್ರವೆಂದರೆ ಅದು ಸವಣಾಲು ಗ್ರಾಮದ ಬೈರಕಲ್ಲು ಎಂಬಲ್ಲಿನ ಶ್ರೀ ಕ್ಷೇತ್ರ ಬೈರವ. ಇಲ್ಲಿ ಮಲೆಕುಡಿಯ ಸಮಾಜ ಬಾಂಧವರ ನೇತೃತ್ವದಲ್ಲಿ ವೈಭವಯುತವಾಗಿ ದೈವದ ಕಾರ್ಯ ನಡೆಯುತ್ತಾ ಬಂದಿತ್ತು.

ಈ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ದೈವದ ಯಾವುದೇ ಕಾರ್ಯಗಳು ನಡೆಯದೆ ಸಾಂಪ್ರದಾಯಿಕವಾಗಿ ಪರ್ವ ಸೇವೆ ನಡೆಸುತ್ತಿದ್ದರು.ಕಳೆದ ಐದು ವರ್ಷಗಳಿಂದ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಸಂಕಲ್ಪದಿಂದ ಮಲೆಕುಡಿಯ ಸಮಾಜದ ಈ ದೈವಸ್ಥಾನಕ್ಕೆ ಸಂಬಂಧಿಸಿದ 28 ಮನೆಯವರು ಪ್ರಾರಂಭಿಸಿರುತ್ತಾರೆ.

ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂಪಾಯಿ. 1.5 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಜನಪ್ರತಿನಿಧಿಗಳು, ಊರ ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಗಳು, ಇಲಾಖಾ ವತಿಯಿಂದ ಈ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಬೇಕು.

ಹಿಂದಿನ ಕಾಲದಲ್ಲಿ ನಡೆಯುತ್ತಿದ್ದು ಸಂಪ್ರಾದಾಯ ದೈವಸ್ಥಾನ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಬದ್ಧರಾಗಿದ್ದು, ಈ ವ್ಯವಸ್ಥೆಗಳಿಗೆ ದೈವಸ್ಥಾನಕ್ಕೆ ಸಂಬಂಧಿಸಿದ 28 ಮನೆಗಳ ಸದಸ್ಯರನ್ನೊಳಗೊಂಡ ಶ್ರೀ ಬೈರವ ಮೂಜಿಲ್ಲಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ರಚಿಸಲಾಗಿದೆ ಎಂದರು

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಸಾಂತಪ್ಪ ಮಲೆಕುಡಿಯ, ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ಕೋಶಾಧಿಕಾರಿ ಸುಂದರ ಮಲೆಕುಡಿಯ, ಗುತ್ತು ಮನೆಯ ಮಾಲಕ ರಾಮಣ್ಣ ಮಲೆಕುಡಿಯ, ಜೊತೆ ಕಾರ್ಯದರ್ಶಿ ಕುಸುಮಾಧರ ಮೊದಲಾದವರು ಹಾಜರಿದ್ದರು.

- Advertisement -
spot_img

Latest News

error: Content is protected !!