Monday, June 8, 2026
Homeಕರಾವಳಿಪಾಣೆಮಂಗಳೂರು: ಬೈಕ್ ಚಾಲನೆಯಲ್ಲಿಟ್ಟು ನಾಪತ್ತೆಯಾಗಿದ್ದ ಯುವಕನ ಮೃತದೇಹ ಮಂಜೇಶ್ವದಲ್ಲಿ ಪತ್ತೆ!

ಪಾಣೆಮಂಗಳೂರು: ಬೈಕ್ ಚಾಲನೆಯಲ್ಲಿಟ್ಟು ನಾಪತ್ತೆಯಾಗಿದ್ದ ಯುವಕನ ಮೃತದೇಹ ಮಂಜೇಶ್ವದಲ್ಲಿ ಪತ್ತೆ!

- Advertisement -
- Advertisement -

ಪಾಣೆಮಂಗಳೂರು: ಬೆಂಗಳೂರು ಮೂಲದ ಯುವಕನೊಬ್ಬ ಪಾಣೆಮಂಗಳೂರು ಸೇತುವೆಯಲ್ಲಿ ಬೈಕ್ ಅನ್ನು ಚಾಲನೆಯಲ್ಲಿಟ್ಟು ನಾಪತ್ತೆಯಾಗಿದ್ದವನ ಮೃತದೇಹ ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29)ಎಂದು ಗುರುತಿಸಲಾಗಿದೆ. ಕಾಸರಗೋಡು ಕರಾವಳಿ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು, ಆತನ ಮನೆಯವರು ಇಂದು ಕಾಸರಗೋಡಿಗೆ ತಲುಪಿ ಆತನ ಗುರುತು ಪತ್ತೆಹಚ್ಚಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಬಿಟ್ಟುಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತ್ಯವೇಲು ಜು.28ರಂದು ಮನೆಯಿಂದ ಬೈಕ್‌ ನಲ್ಲಿ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ತಾಯಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಪಾಣೆಮಂಗಳೂರಿನ ಸೇತುವೆಯಲ್ಲಿ ಈತನ ಬೈಕ್‌ ಚಾಲನೆಯಲ್ಲಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

- Advertisement -

Latest News

error: Content is protected !!