Friday, June 5, 2026
Homeಕರಾವಳಿಬೈಕಂಪಾಡಿಯಲ್ಲಿ ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ‌ ಪ್ರಕರಣ: ಗಂಭೀರ ಗಾಯಗೊಂಡಿದ್ದ ರವಿರಾಜ್ ಬಂಗೇರ ಸಾವು

ಬೈಕಂಪಾಡಿಯಲ್ಲಿ ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ‌ ಪ್ರಕರಣ: ಗಂಭೀರ ಗಾಯಗೊಂಡಿದ್ದ ರವಿರಾಜ್ ಬಂಗೇರ ಸಾವು

- Advertisement -
- Advertisement -

ಮಂಗಳೂರು: ಬೈಕಂಪಾಡಿಯ ಮೀನಕಳಿ ರಸ್ತೆಯಲ್ಲಿ ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ  ಯುವಕ‌ ರವಿರಾಜ್ @ರಾಜಾ@ ರಾಘವೇಂದ್ರ@ ರವಿರಾಜ್ ಬಂಗೇರ(28) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಈತ ಕೊಲೆ ಯತ್ನ ಸಹಿತ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ.

ಗಂಭೀರವಾಗಿ ಗಾಯಗೊಂಡ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ರಾತ್ರಿ‌ ಬೈಕಂಪಾಡಿ ಸುಪ್ರಿಯಾ ಬಾರ್‌ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ರವಿರಾಜ್  ಪರಿಚಯಸ್ಥರೇ ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ತಲವಾರು ಮತ್ತು ಚಾಕುವಿನಿಂದ ಮುಖ, ತಲೆ, ಕೈಗೆ ಹೊಡೆದಿದ್ದು ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಬಿದ್ದಿದ್ದಾರೆ.

ಸ್ನೇಹಿತರು ಕೊಲೆಯತ್ನ ನಡೆಸಿದ ಬಗ್ಗೆ ಗಾಯಾಳು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.ಈ ಕುರಿತು ಪಣಂಬೂರು ಠಾಣೆಯಲ್ಲಿ ‌ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!