Saturday, October 17, 2026
Homeಕರಾವಳಿಮಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ನೇಮಕ

ಮಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ನೇಮಕ

- Advertisement -
- Advertisement -

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ಅವರನ್ನು ನೇಮಕ ಮಾಡಲಾಗಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಅಧ್ಯಕ್ಷರ ಹುದ್ದೆಗೇರಲು ವಿಶ್ವ ಹಿಂದು ಪರಿಷತ್ತಿನಲ್ಲಿ ಗುರುತಿಸಿದ್ದ ಜಗದೀಶ ಶೇಣವ, ದ.ಕ. ಜಿಲ್ಲಾ ಬಿಜೆಪಿ ವಕ್ತಾರನಾಗಿದ್ದ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್ ನಡುವೆ ಪೈಪೋಟಿ ನಡೆದಿತ್ತು.

ಆದರೆ ಇದೀಗ ಬಿಲ್ಲವ ಸಮುದಾಯದ ಹಿರಿಯ ಮುಖಂಡ, ರವಿಶಂಕರ್ ಮಿಜಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೂಡಾ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

- Advertisement -

Latest News

error: Content is protected !!