Sunday, May 19, 2024
Homeತಾಜಾ ಸುದ್ದಿಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಥ ಯಾತ್ರೆ : ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್...

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಥ ಯಾತ್ರೆ : ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ನಿರ್ದೇಶನ

spot_img
- Advertisement -
- Advertisement -

ಬೆಂಗಳೂರು : ಸ್ವಾತಂತ್ರ್ಯದ ಅಮೃತಮಹೋತ್ಸವದ‌ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಾಲ್ಕು ಹಂತದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಎಂಟು ದಿನಗಳ ಕಾಲ ರಥಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದ ಪರಿಶೀಲನಾ ಸಭೆ ನಡೆಸಲಾಗಿದ್ದು, ನಾಡಿನ ಸಾಂಸ್ಕ್ರತಿಕ ಇತಿಹಾಸದಲ್ಲೇ ವಿನೂತನವಾದ ರೀತಿಯಲ್ಲಿ ರಥಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶೀರ್ಷಿಕೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸ್ವಾತಂತ್ರ್ಯದ ಹಬ್ಬ ನಡೆಯಲಿದೆ.

ಮೇ 28 ರಂದು ಮೊದಲ ಹಂತದ ಕಾರ್ಯಕ್ರಮ‌ ನಡೆಯಲಿದೆ. 25 ಸ್ಥಳಗಳಲ್ಲಿ ಅಮೃತ ಮಹೋತ್ಸವದ ಆಚರಣೆಯ ಜತೆಗೆ ಮೆರವಣಿಗೆ, ಶಿಲಾಫಲಕಗಳ ಅಳವಡಿಕೆ, ಉಪನ್ಯಾಸ, ಪ್ರದರ್ಶಿನಿ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ಸಾಕ್ಷ್ಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಜೂನ್ ಹದಿನೈದರಿಂದ 30 ರವರೆಗೆ ಹೋರಾಟದ ನೆಲದಲ್ಲಿ ಒಂದು ದಿನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ರಾಜ್ಯದ ಆಯ್ದ ಹದಿನೈದು ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಹೋರಾಟದ ಭೂಮಿಯನ್ನು ಸ್ಮರಣೀಯವಾಗಿಸುವ ಜತೆಗೆ ಯುವಕರು, ವಿದ್ಯಾರ್ಥಿಗಳಿಗೆ ಪ್ರೇಕ್ಷಣೀಯವಾಗಿಸಲು ನಿರ್ಧರಿಸಲಾಗಿದೆ.

ಮೂರನೇ ಹಂತದಲ್ಲಿ ಆಗಸ್ಟ್ ಒಂದರಿಂದ ಆಗಸ್ಟ್ 8 ರವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ  ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶೀರ್ಷಿಕೆಯಲ್ಲಿ ಆರು ಸ್ವಾತಂತ್ರ್ಯ  ಅಮೃತ ಮಹೋತ್ಸವದ ರಥಯಾತ್ರೆ ನಡೆಸಲಾಗುತ್ತದೆ. ರಾಜ್ಯದ ಮೂವತ್ತೊಂದು ಜಿಲ್ಲೆಗಳನ್ನು ಹಾದು ಈ ರಥಯಾತ್ರೆ ಬೆಂಗಳೂರಿಗೆ ತಲುಪಲಿದೆ.

ಪೂರ್ವ ತಯಾರಿ ಸಭೆಯನ್ನು ಮೇ ಹತ್ತರ ಒಳಗೆ ಮುಗಿಸಬೇಕು ಎಂದು ಸಚಿವ ಸುನೀಲ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

- Advertisement -
spot_img

Latest News

error: Content is protected !!