ಬೆಳ್ತಂಗಡಿ : ಸಾಮಾಜಿಕ ಸೇವಾ ರಂಗದಲ್ಲಿ ಪಾದರಸ ಶೈಲಿಯಲ್ಲಿ ಸೇವೆ ಮಾಡುವ ಉತ್ಸಾಹೀ ಯುವಕ ರಶೀದ್ ಕುಂಡಡ್ಕ ಎಂಬ ಚುರುಕಿನ ಯುವಕ ಸರ್ವರಿಗೂ ಚಿರಪರಿಚಿತ ಹೆಸರು.ತನ್ನ ಸ್ವಂತ ಕಾರ್ಯಗಳಿಗಿಂತ ಹೆಚ್ಚಾಗಿ ಇತರರ ಅಗತ್ಯ ಪೂರೈಸಲು ಉತ್ಸಾಹ ತೋರಿಸುವ ಈ ಉತ್ಸಾಹೀ ತರುಣ ಏನಾದರೊಂದು ಮಾಡುತ್ತಲೇ ಇರಬೇಕೆಂದು ತೀರ್ಮಾನಿಸಿದ ಮಾದರಿ ಯುವ ನಾಯಕ.
ಕಳೆದ ಕೋವಿಡ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಅರ್ಹರಿಗೆ ತಲುಪಿಸಿ ಜಾತಿ ಮತ ಬೇಧವಿಲ್ಲದೆ ಕಾರುಣ್ಯ ಸ್ಪರ್ಶ ನೀಡಿ ಜಾತಿ ಮತ ಎಂದು ಹೊಡೆದಾಟ ಬಡಿದಾಟ ನಡೆಸುವವರಿಗೆ ಸಮಾನತೆ ಮತ್ತು ಮಾನವತೆಯ ಪಾಠ ನೀಡಿದ್ದರು.ಇದೀಗ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಶಂಸುಲ್ ಹುದಾ ಜುಮುಅಃ ಮಸ್ಜಿದ್ ನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ರಶೀದ್ ಕುಂಡಡ್ಕ ಮಹತ್ತರ ಜವಾಬ್ದಾರಿ ಯೊಂದನ್ನು ವಹಿಸಿಕೊಂಡಿದ್ದಾರೆ.ಕುಂಡಡ್ಕ ಮಸೀದಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿರುವ ಒಂದು ಗ್ರಾಮೀಣ ಪ್ರದೇಶದ ಮಸೀದಿ.ಇಲ್ಲಿನ ಜನರು ಐಕ್ಯತೆ ಯಿಂದ ಪ್ರೀತಿ ವಿಶ್ವಾಸ ದಿಂದ ಹಿಂದೂ ಮುಸ್ಲಿಂ ಕ್ರೈಸ್ತ ಭಾವೈಕ್ಯ ಭಾವದಿಂದ ಜೀವಿಸುವ ಸ್ನೇಹ ಜೀವಿಗಳು.
ಇಲ್ಲಿನ ಕುಂಡಡ್ಕ ಮಸೀದಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಶೀದ್ ಕುಂಡಡ್ಕ ಅವರು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಪ್ರಮಾಣಿಕವಾಗಿ ಮಾಡಿದ್ದಾರೆ.ಸಿಸಿ ಟಿವಿ ಅಳವಡಿಕೆ ಅದರಲ್ಲಿ ಪ್ರಮುಖವಾದುದು.ಇತ್ತೀಚಿಗೆ ಜಮಾಅತ್ ನ ಎಲ್ಲಾ ಮನೆಯವರಿಗೆ ಉತ್ತಮ ಗುಣಮಟ್ಟದ ಕಿಟ್ ವಿತರಣೆ ಮಾಡುವ ಮೂಲಕ ರಶೀದ್ ಕುಂಡಡ್ಕ ಅತ್ಯುತ್ತಮ ಮತ್ತು ಮಾದರೀ ಎನಿಸುವ ಸೇವೆಯನ್ನು ಮಾಡಿ ಸರ್ವ ಜಮಾಅತಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಜಮಾಅತಿನವರಿಗೆ ರಶೀದ್ ಕುಂಡಡ್ಕ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿತ್ತು.ಅವುಗಳನ್ನು ಅವರು ಹಂತ ಹಂತವಾಗಿ ನಿರ್ವಹಿಸುತ್ತಾ ಬಂದಿದ್ದಾರೆ.ಮುಂದಿನ ಅಧ್ಯಕ್ಷ ಅವಧಿಯಲ್ಲಿ ಕೂಡ ಇದಕ್ಕಿಂತ ಹೆಚ್ಚಿನ ಅಭಿವೃದ್ಧಿ ಮತ್ತು ಸೇವೆಯನ್ನು ಮಾಡುವ ತುಂಬು ವಿಶ್ವಾಸ ಊರಿನ ಜನರಿಗಿದೆ.ಈ ಪವಿತ್ರ ಸ್ಥಾನಕ್ಕೆ ಆಯ್ಕೆಯಾಗಿರುವುದು ನಾಡಿನ ಪ್ರತಿಯೊಬ್ಬರಿಗೂ ಸಂತೋಷ ಮತ್ತು ಅಭಿಮಾನದ ಸಂಗತಿ ಎಂದರೆ ಅತಿಶಯೋಕ್ತಿಯಾಗಲಾರದು.ಯಾಕೆಂದರೆ ಅವರು ಸದಾ ಸೇವಾ ನಿರತ ಸ್ವಭಾವ ಗುಣದ ಯುವ ನಾಯಕರಾಗಿ ಊರಿನ ಒಳಗೂ ಹೊರಗೂ ಗುರುತಿಸಲ್ಪಡುವ ಒಬ್ಬ ನಿಷ್ಕಳಂಕ ವ್ಯಕ್ತಿತ್ವದ ಒಡೆಯರಾಗಿದ್ದಾರೆ.
ಸರಕಾರ ಮಟ್ಟದಲ್ಲಿ ಉತ್ತಮ ಸಂಬಂಧ ಇರುವ ರಶೀದ್ ಕುಂಡಡ್ಕ ಅವರು ಮಸೀದಿ, ಮದ್ರಸಗಳಿಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಮಾಡಲು ಮುತುವರ್ಜಿ ತೋರಿಸುವರು ಎಂಬುದು ತರ್ಕವಿಲ್ಲದ ಮಾತು.
ನಾಡಿನ ಅಭಿವೃದ್ಧಿ ಮತ್ತು ಸಮಗ್ರ ಪ್ರಗತಿಯ ಕನಸು ಕಾಣುತ್ತಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಶೀದ್ ಕುಂಡಡ್ಕ ಅವರಿಗೆ ಅರ್ಹವಾಗಿಯೇ ಮತ್ತೊಮ್ಮೆ ಈ ಸ್ಥಾನ ಲಭಿಸಿದೆ.
ಬಡತನದಿಂದ ವಿವಾಹವೆಂಬ ಕನಸು ದೂರವಾಗಿಯೇ ಉಳಿದಿರುವ ಬಡ ಹೆಣ್ಮಕ್ಕಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿ ಬಡವರ ಕಣ್ಣೀರೊರೆಸುವ ಆಪದ್ಬಾಂಧವ ನೆನಿಸಿರುವ ಹೃದಯ ವಂತರಾದ ರಶೀದ್ ಕುಂಡಡ್ಕ,ರಕ್ತದಾನ ಎಂಬ ಮಹಾದಾನ ಮೂಲಕ ಹಲವಾರು ಯುನಿಟ್ ರಕ್ತ ಸಂಗ್ರಹಣೆ ಮೂಲಕ ಜೀವದಾನ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಯಾವುದೇ ಒಂದು ಸ್ಥಾನಮಾನ ಪಡೆಯಬೇಕೆಂದು ಆಗ್ರಹವಿಲ್ಲದೆ ನಿಸ್ವಾರ್ಥ ಮತ್ತು ನಿಷ್ಕಳಂಕ ಸೇವೆ ಮಾಡುವವರು.
ಇವರು ಸನ್ಮಾನ,ಸ್ಥಾನಮಾನದ ಹಿಂದೆ ಹೋದವರಲ್ಲ. ತಾನು ಮಾಡುವ ಕೆಲಸ ಕಾರ್ಯಗಳನ್ನು ಯಾವುದೇ ಪ್ರಚಾರ ಬಯಸದೆ ಎಲೆ ಮರೆ ಕಾಯಿಯಂತೆ ಪ್ರತಿಫಲಾಪೇಕ್ಷೆಯಿಲ್ಲದೆ ಮಾದರಿಯಾಗಿ ಸೇವೆ ಮಾಡುವ ಉದಾತ್ತ ಮನಸ್ಸಿನ ರಶೀದ್ ಕುಂಡಡ್ಕ ಅವರಿಗೆ ಅಲ್ಲಾಹು ಎಲ್ಲಾ ರೀತಿಯ ಒಳಿತುಗಳನ್ನು ಕರುಣಿಸಲಿ.ಉತ್ತಮ ಭವಿಷ್ಯ, ಆಫಿಯತ್ ಆರೋಗ್ಯ, ಸುಖ,ನೆಮ್ಮದಿ, ಐಶ್ವರ್ಯ ಗಳನ್ನು ನೀಡಲಿ ಎಂದು ಮನದಾಳದಿಂದ ಹಾರೈಸುವ.