Tuesday, September 17, 2024
Homeತಾಜಾ ಸುದ್ದಿಮುಂದಿನ ದಿನಗಳಲ್ಲಿ ಇನ್ನಷ್ಟು ಕೋವಿಡ್ 19 ಸೋಂಕು ಹೆಚ್ಚಳ ಸಾಧ್ಯತೆ!

ಮುಂದಿನ ದಿನಗಳಲ್ಲಿ ಇನ್ನಷ್ಟು ಕೋವಿಡ್ 19 ಸೋಂಕು ಹೆಚ್ಚಳ ಸಾಧ್ಯತೆ!

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನದಲ್ಲಿ 44 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಕಳೆದ ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ 99 ಆಗಿದೆ. ಪರೀಕ್ಷೆಗಳು ಹೆಚ್ಚಿದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ.

ಮಾರ್ಚ್‌ ಅಂತ್ಯದಲ್ಲಿ ನಿತ್ಯ 200ರಿಂದ 250 ಮಾದರಿ ಪರೀಕ್ಷೆ ಮಾಡಲಾಗುತ್ತಿತ್ತು. ಸರಾಸರಿ 7 ಮಂದಿ ಯಲ್ಲಿ ಸೋಂಕು ದೃಢವಾಗುತ್ತಿತ್ತು. ಬಳಿಕ ಎಪ್ರಿಲ್‌ ಮೊದಲ ವಾರದಲ್ಲಿ 300 ರಿಂದ 350 ಮಾದರಿ ಪರೀಕ್ಷಿಸಿದಾಗ ಸೋಂಕಿತರ ಸಂಖ್ಯೆ ಸರಾಸರಿ 12 ಏರಿಕೆಯಾಯಿತು. ಎಪ್ರಿಲ್‌ ಎರಡನೇ ವಾರ 500 ರಿಂದ 550 ಮಾದರಿ ಸೋಂಕು ಸೋಂಕು ಪರೀಕ್ಷೆ ನಡೆಸಿದಾಗ ಸೋಂಕಿತರ ಸಂಖ್ಯೆ 15ಕ್ಕೆ ತಲುಪಿತು. ಇನ್ನು ಎ.15 ರಂದು 1,376 ಮಾದರಿ ಪರೀಕ್ಷೆ ಮಾಡಿದ್ದು, 19 ಸೋಂಕಿತರು, ಎ. 16ರಂದು 1,500 ಮಾದರಿ ಪರೀಕ್ಷೆ 36 ಸೋಂಕಿತರು, ಎ.17 ರಂದು 2,070 ಮಾದರಿ ಪರೀಕ್ಷೆ ಮಾಡಿದ್ದು 44 ಸೋಂಕಿತರು ಪತ್ತೆಯಾಗಿದ್ದಾರೆ.

ಪ್ರಕರಣಗಳೂ 3 ಪಟ್ಟು ಹೆಚ್ಚಳ
ಸೋಂಕು ಪರೀಕ್ಷೆಯು ಕಳೆದ ಒಂದು ವಾರಕ್ಕಿಂತ ಮೂರು ಪಟ್ಟು ಪ್ರಮಾಣದಲ್ಲಾಗುತ್ತಿದ್ದು, ಪ್ರಕರಣಗಳ ಸಂಖ್ಯೆಯೂ 3 ಪಟ್ಟು ಹೆಚ್ಚಿವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 10 ಹೊಸ ಪ್ರಯೋಗಾಲಯಗಳು ಕಾರ್ಯಾ ರಂಭಿಸಲಿವೆ, ಜತೆಗೆ ಶನಿವಾರ ದಿಂದ ರ್ಯಾಪಿಡ್‌ ಟೆಸ್ಟ್‌ಗೆ ರಾಜ್ಯ ಸರಕಾರ ಮುಂದಾಗಿದೆ.

ಒಂದು ಪ್ರದೇಶದಲ್ಲಿ ಕೋವಿಡ್ 19ಸೋಂಕು ಹೆಚ್ಚಳವು ಆ ಪ್ರದೇಶಲ್ಲಿ ನಡೆಯುವ ಸೋಂಕು ಪರೀಕ್ಷೆಯನ್ನು ಆಧರಿಸಿರುತ್ತದೆ ಎನ್ನುತ್ತಾರೆ ತಜ್ಞರು. ಈ ಹಿಂದೆ ರಾಜ್ಯದಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಪ್ರಯೋಗಾಲಯಗಳ ಕೊರತೆ ಇತ್ತು.

ಜತೆಗೆ ವಿದೇಶ ಸಂಪರ್ಕ ಹಿನ್ನೆಲೆ ಇದ್ದರೆ ಮಾತ್ರವೇ ಪರೀಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಸದ್ಯ ಪ್ರಯೋಗಾಲಯ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯಕ್ಕೆ 12,400 ಕೋವಿಡ್ 19 ರ್ಯಾಪಿಡ್‌ ಟೆಸ್ಟ್‌ಗೆ ಲಭ್ಯವಾಗಿದ್ದು, ಇವುಗಳ ಮೂಲಕ ಪರೀಕ್ಷೆ ಸುಲಭವಾಗಿ ಪ್ರಕರಣಗಳ ಪತ್ತೆಗೆ ಸಹಾಯಕವಾಗಲಿದೆ.

ಜ್ವರ ಬಂದರೆ ಕೋವಿಡ್ 19 ಪರೀಕ್ಷೆ ಕಡ್ಡಾಯ
ಈ ಹಿಂದೆ ವಿದೇಶ ಪ್ರಯಾಣ ಹಿನ್ನೆಲೆ ಹೊಂದಿದ್ದು, ಸೋಂಕು ಲಕ್ಷಣ ಹೊಂದಿದ್ದರೆ ಮಾತ್ರ ಪರೀಕ್ಷೆ ಮಾಡಲಾಗುತ್ತಿತ್ತು. ಬಳಿಕ ಸೋಂಕಿತ ಪ್ರಾಥಮಿಕ ಸಂಪರ್ಕ ಹೊಂದಿದ ವರನ್ನು ಬಳಿಕ ದ್ವಿತೀಯ ಸಂಪರ್ಕ ಹೊಂದಿದವರನ್ನು ಪರೀಕ್ಷೆಗೊಳಪಡಿಸ ಲಾಯಿತು. ಸದ್ಯ ಜ್ವರ ಬಂದವರು ಕೂಡ ಕೋವಿಡ್ 19 ಪರೀಕ್ಷೆ ಮಾಡಿಸಬೇಕು ಎಂದು ತಜ್ಞರ ವೈದ್ಯರ ತಂಡ ಸರಕಾರಕ್ಕೆ ಸಲಹೆ ನೀಡಿದ್ದು, ಸರಕಾರ ಈ ಕ್ರಮ ಜಾರಿಗೆ ಮುಂದಾಗಿದೆ.

ನಿತ್ಯ 5 ಸಾವಿರ ಮಾದರಿ ಪರೀಕ್ಷೆ ಗುರಿ
ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಅನಗತ್ಯವಾಗಿ ಜನ ಆತಂಕ ಪಡದೆ ಸೋಂಕಿನ ಲಕ್ಷಣಗಳಿದ್ದರೆ ಪರೀಕ್ಷೆಗೆ ಒಳಗಾಗಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್‌.ಮಂಜುನಾಥ್‌ ಹೇಳುತ್ತಾರೆ.

ಕೋವಿಡ್ 19 ಸೋಂಕು ಪರೀಕ್ಷೆಗೆ ಸದ್ಯ ರಾಜ್ಯದಲ್ಲಿ 18 ಲ್ಯಾಬ್‌ಗಳಿದ್ದು, ತಿಂಗಳಾಂತ್ಯಕ್ಕೆ 10ಕ್ಕೂ ಹೆಚ್ಚು ಲ್ಯಾಬ್‌ಗಳಿಗೆ ಅನುಮತಿ ಲಭ್ಯವಾಗಲಿದೆ. ಆ ವೇಳೆ ನಿತ್ಯ 5000ಕ್ಕೂ ಅಧಿಕ ಮಾದರಿ ಪರೀಕ್ಷೆ ಮಾಡುವ ಗುರಿ ಹೊಂದಿದ್ದೇವೆ. ಸದ್ಯ ಸೋಂಕಿತನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಪರೀಕ್ಷೆ ಮಾಡಲಾಗುತ್ತಿದ್ದು, ಮುಂದೆ ಎಲ್ಲಾ ಹೋಂ ಕ್ವಾರೆಂಟೈನ್‌ಗಳಿಗೂ ಕಡ್ಡಾಯವಾಗಿ ಪರೀಕ್ಷೆ ಮಾಡ ಲಾಗುತ್ತದೆ. ಇನ್ನು ರ್ಯಾಪಿಟ್‌ ಟೆಸ್ಟ್‌ ಕಿಟ್‌ಗಳನ್ನು ಪರೀಕ್ಷೆ ಬಳಸಲಾಗುತ್ತಿದೆ. ಈ ಕಿಟ್‌ಗಳ ಮೂಲಕ ಕಡಿಮೆ ವೆಚ್ಚ ಹಾಗೂ ಸಮಯದಲ್ಲಿ ಸುಲಭವಾಗಿ ಪರೀಕ್ಷೆ ಮಾಡಬಹುದು. ಪ್ರಯೋ ಗಾಲಯದಲ್ಲಿ 2250 ರೂ. ಖರ್ಚಾ ದರೆ ಇಲ್ಲಿ 700 ರೂ.ನಲ್ಲಿ ಪರೀಕ್ಷೆ ಮಾಡಬಹುದು. ವರದಿಯೂ 20 ನಿಮಿಷದಲ್ಲಿ ಬರಲಿದೆ.

- Advertisement -
spot_img

Latest News

error: Content is protected !!