- Advertisement -
- Advertisement -
ಗೋರಖ್ಪುರದಲ್ಲಿ ಅಪರಾಧ ಪ್ರಕರಣವೊಂದು ನಡೆದಿದೆ. ಇಲ್ಲಿನ ಅಗರ್ವಾಲ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದನಂತೆ. ಕೆಲ ದಿನ ನಡೆದ ಪ್ರೇಮ ವಿವಾಹ ಗಲಾಟೆಯಲ್ಲಿ ಮುರಿದುಬಿದ್ದಿದೆ. ನಂತ್ರ ಇಬ್ಬರೂ ಬೇರೆ ವಾಸ ಶುರು ಮಾಡಿದ್ದಾರೆ.
ಒಂದು ದಿನ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದ ಅಗರ್ವಾಲ್ ದಂಗಾಗಿದ್ದಾನೆ. ಮನೆ ಬೀಗ ಮುರಿದಿದ್ದು, ಮನೆಯಲ್ಲಿದ್ದ 50 ಸಾವಿರ ನಗದು ಹಾಗೂ ಆಭರಣಗಳನ್ನು ಕಳ್ಳರು ದೋಚಿದ್ದರು. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮನೆಗೆ ಹಾಕಿದ್ದ ಸಿಸಿ ಟಿವಿ ನೋಡಿದ್ದಾರೆ.
ಅಲ್ಲಿದ್ದ ದೃಶ್ಯ ದಂಗಾಗಿಸುವಂತಿದೆ. ಈ ಕಳ್ಳತನವನ್ನು ಆತನ ಪತ್ನಿಯೇ ಮಾಡಿದ್ದಾಳೆ. ಆಕೆ ಜೊತೆ ಇಬ್ಬರು ಯುವಕರು ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಪೊಲೀಸರು ಮಹಿಳೆ ಬಂಧನಕ್ಕೆ ತಯಾರಿ ನಡೆಸಿದ್ದಾರೆ.
- Advertisement -