Monday, June 29, 2026
Homeಅಪರಾಧಮಂಗಳೂರು: ಅಮಲು ಪದಾರ್ಥ ಕೊಟ್ಟು ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ; ಹಳೆ ರೌಡಿಶೀಟರ್ ಬಂಧನ!

ಮಂಗಳೂರು: ಅಮಲು ಪದಾರ್ಥ ಕೊಟ್ಟು ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ; ಹಳೆ ರೌಡಿಶೀಟರ್ ಬಂಧನ!

- Advertisement -
- Advertisement -

ಮಂಗಳೂರು: ರೌಡಿಶೀಟರ್ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳನ್ನು ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಅತ್ಯಾಚಾರ ಮಾಡಿರುವ ಘಟನೆ ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನವೀನ್ ಸಿಕ್ವೆರಾ (34) ಪ್ರಕರಣದ ಬಂಧಿತ ಆರೋಪಿ. ಈತ ಹಳೆ ರೌಡಿಶೀಟರ್ ಮತ್ತು ಕೈಕಂಬದ ಹೊಟೇಲ್ ಒಂದರಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿಗೆ ಸಂತ್ರಸ್ತೆಯ ಅಣ್ಣನ ಪರಿಚಯ ಇದ್ದುದರಿಂದ ಆಗಾಗ ಮನೆಗೆ ಬಂದು ಹೋಗುವುದನ್ನು ಮಾಡುತ್ತಿದ್ದ. ಆಕೆಯ ಮೊಬೈಲ್ ನಂಬರ್ ಪಡೆದು ವಾಟ್ಸಪ್ ಚಾಟ್ ಮಾಡುತ್ತಿದ್ದ. ಹೀಗಿರುವಾಗ ಎರಡು ದಿನಗಳ ಹಿಂದೆ ಆಕೆಯ ಮನೆಯಲ್ಲಿ ಯಾರೂ ಇರದೇ ಇರುವುದನ್ನು ತಿಳಿದು ಸೀದ ಮನೆಗೆ ಬಂದಿದ್ದು, ಜ್ಯೂಸ್ ನಲ್ಲಿ ಮತ್ತು ಬರಿಸುವ ಅಮಲು ಪದಾರ್ಥ ಹಾಕಿಕೊಟ್ಟು ಆನಂತರ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಕೆಯ ಅತ್ಯಾಚಾರ ನಡೆಸಿದ್ದಾನೆ.

ಸಂಜೆ ಹೊತ್ತಿಗೆ ಯುವತಿಗೆ ವಿಷಯ ತಿಳಿದಿದ್ದು, ತಾಯಿ ಜೊತೆ ಮಂಗಳೂರಿನ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕೇಸು ದಾಖಲಿಸಿದ್ದಾರೆ.

- Advertisement -

Latest News

error: Content is protected !!