Wednesday, October 7, 2026
HomeಕರಾವಳಿKSRTC ಬಸ್ಸಿನಲ್ಲಿ ಪ್ರಜ್ಞಾಹೀನ‌ ಸ್ಥಿತಿಗೆ ಜಾರಿದ ಮಹಿಳೆ: ಬಸ್ಸನ್ನು ಆಸ್ಪತ್ರೆಗೆ ಚಲಾಯಿ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ...

KSRTC ಬಸ್ಸಿನಲ್ಲಿ ಪ್ರಜ್ಞಾಹೀನ‌ ಸ್ಥಿತಿಗೆ ಜಾರಿದ ಮಹಿಳೆ: ಬಸ್ಸನ್ನು ಆಸ್ಪತ್ರೆಗೆ ಚಲಾಯಿ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಚಾಲಕ

- Advertisement -
- Advertisement -

ಬೆಳ್ತಂಗಡಿ: ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ನಲ್ಲಿ ಅ.6 ರಂದು ಸಂಜೆ 4 ಗಂಟೆಗೆ ಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿ, ಮಾತನಾಡಲು ಹಾಗೂ ದೇಹವನ್ನು ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಗಮನಿಸಿದ ಸಹ ಪ್ರಯಾಣಿಕರು ಈ ಬಗ್ಗೆ ಚಾಲಕ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ತೀವ್ರತೆ ಅರಿತ ಬಸ್ ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಕಕ್ಕಿಂಜೆ ಬರುತ್ತಿದ್ದಂತೆಯೇ ನೇರವಾಗಿ ಬಸ್ಸನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ 4:30 ಕ್ಕೆ ಕೊಂಡಯ್ದು ಸಂಕಷ್ಟದಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಅಶ್ರಫ್ ಚಾರ್ಮಾಡಿ, ಫಾರುಕ್ ಕಕ್ಕಿಂಜೆ, ಗಾಂಧಿನಗರ ಹಾಗೂ ನೌಫಾಲ್ ಕಕ್ಕಿಂಜೆ, ಗಾಂಧಿನಗರ ಅವರು ಮಹಿಳೆಗೆ ಅಗತ್ಯ ಸಹಾಯ ಮಾಡುವಲ್ಲಿ ಜೊತೆಯಾಗಿ ನಿಂತಿದ್ದಾರೆ.

- Advertisement -

Latest News

error: Content is protected !!