Thursday, June 25, 2026
Homeತಾಜಾ ಸುದ್ದಿಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ; ದೂರಿನಲ್ಲಿ ಉಲ್ಲೇಖಿತ ಹೆಚ್ ಐವಿ ಸೋಂಕಿತ ಮಹಿಳೆ ಪತ್ತೆ

ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ; ದೂರಿನಲ್ಲಿ ಉಲ್ಲೇಖಿತ ಹೆಚ್ ಐವಿ ಸೋಂಕಿತ ಮಹಿಳೆ ಪತ್ತೆ

- Advertisement -
- Advertisement -

ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಎಸ್ ಐಟಿ ವಶದಲ್ಲಿರುವ ಆರ್‌ಆರ್‌ ನಗರ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಉಲ್ಲೇಖಿಸಿರುವ ಎಚ್‌ಐವಿ ಸೋಂಕಿತೆ ಎನ್ನಲಾದ ಮಹಿಳೆಯನ್ನು ಎಸ್ ಐಟಿ ತಂಡ ಪತ್ತೆ ಹಚ್ಚಿದೆ.

ಶಾಸಕ ಮುನಿರತ್ನ ತಮ್ಮ ರಾಜಕೀಯ ವಿರೋಧಿಗಳನ್ನು ಎಚ್‌ಐವಿ ಸೋಂಕಿತೆಯನ್ನು ಬಳಸಿಕೊಂಡು ಏಡ್ಸ್‌ ಟ್ರ್ಯಾಪ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಲಾಗಿತ್ತು. ಇನ್ನು ಅತ್ಯಾಚಾರ ಕುರಿತ ದೂರಿನಲ್ಲಿ ಓರ್ವ ಎಚ್‌ಐವಿ ಸೋಂಕಿತೆ ಎಂದೂ ಮಹಿಳೆ ಹೆಸರು ಸಹ ಉಲ್ಲೇಖವಾಗಿತ್ತು.

ಆದರೆ ಪ್ರಕರಣ ದಾಖಲಾದ ಬಳಿಕ ಭೂಗತವಾಗಿದ್ದ ಎಚ್‌ ಐವಿ ಸೋಂಕಿತೆ ಎನ್ನಲಾದ ಮಹಿಳೆಯನ್ನು ಪತ್ತೆ ಹಚ್ಚಿದ ಎಸ್‌ಐಟಿ, ಆಕೆ ಎಚ್‌ಐವಿ ಸೋಂಕಿತಳೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ನಡೆಸಿ ವರದಿ ಪಡೆಯಲು ಯೋಚಿಸಿದೆ. ಈ ಬಗ್ಗೆ 2-3 ದಿನಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಈ ವೈದ್ಯಕೀಯ ವರದಿಯೂ ಮುನಿರತ್ನ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಒಂದು ವೇಳೆ ಆಕೆಯ ವರದಿ ಪಾಸಿಟಿವ್ ಬಂದರೆ ಮುನಿರತ್ನ ವಿರುದ್ದ ಏಡ್ಸ್ ಟ್ರ್ಯಾಪ್ ಆರೋಪಕ್ಕೆ ಪ್ರಬಲ ವೈದ್ಯಕೀಯ ಪುರಾವೆ ಸಿಕ್ಕಂತಾಗುತ್ತದೆ. ಇದರಿಂದ ಶಾಸಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!