Monday, June 8, 2026
Homeಕರಾವಳಿಮಂಗಳೂರು:ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಅವರ ತಂದೆ ರಮೇಶ್ ಶಾಂತಿ ವಿಧಿವಶ

ಮಂಗಳೂರು:ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಅವರ ತಂದೆ ರಮೇಶ್ ಶಾಂತಿ ವಿಧಿವಶ

- Advertisement -
- Advertisement -

ಮಂಗಳೂರು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರ ತಂದೆ ರಮೇಶ್ ಶಾಂತಿ ವಿಧಿವಶರಾಗಿದ್ದಾರೆ. ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ.

ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಅವರನ್ನು ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂಡಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರು ಪೂಜೆಯ ಅರ್ಚಕರಾಗಿಯೂ, ಮೂಡ ಬಿದಿರೆ ಅಯ್ಯಪ್ಪ ದೇವಸ್ಥಾನ ಸ್ಥಾಪಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಅಯ್ಯಪ್ಪ ಗುರುಸ್ವಾಮಿಯಾಗಿ 51 ವರ್ಷಗಳ ಕಾಲವೂ ಯಾತ್ರೆ ಕೈಗೊಂಡ ಅಪರಿಮಿತ ಅಯ್ಯಪ್ಪ ಭಕ್ತರಾಗಿದ್ದರು. ಮಾತ್ರವಲ್ಲದೆ ಅಸಂಖ್ಯ ಮಾಲಾಧಾರಿಗಳಿಗೆ ಮಾಲೆ ಹಾಕಿದ್ದಾರೆ. 500 ಕ್ಕೂ ಅಧಿಕ ಮಂದಿಗೆ ವ್ರತದೀಕ್ಷೆಯನ್ನು ಇವರು ನೀಡಿದ್ದಾರೆ. ಅವರು ಸುದರ್ಶನ್ ಎಂ ಸಹಿತ ನಾಲ್ಕು ಜನ ಗಂಡು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

- Advertisement -

Latest News

error: Content is protected !!