Monday, June 8, 2026
Homeಕರಾವಳಿಮಂಗಳೂರು; ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ; ಒಟ್ಟು  1.59 ಕೋ. ರೂ. ಮೌಲ್ಯದ ಚಿನ್ನ...

ಮಂಗಳೂರು; ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ; ಒಟ್ಟು  1.59 ಕೋ. ರೂ. ಮೌಲ್ಯದ ಚಿನ್ನ ವಶ

- Advertisement -
- Advertisement -

ಮಂಗಳೂರು: ದಿನಾಂಕ ಅ.8ರಿಂದ ಅ.21ರ ವರೆಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.59 ಕೋ. ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 3124.540 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಪ್ರಯಾಣಿಕರೆಲ್ಲರೂ ದುಬೈನಿಂದ ಬಂದಿದ್ದು, ಒಳಉಡುಪುಗಳ ಒಳಗೆ ಘನ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮರೆ ಮಾಚಿ ಹಾಗೂ ಕೆಲವರು ಗುದನಾಳದಲ್ಲಿ ಮತ್ತು ಕೆಲವು ದ್ರಾವಣದಲ್ಲಿ ಅದ್ದಿದ ಟವೆಲ್‌ಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ

- Advertisement -

Latest News

error: Content is protected !!