Monday, May 20, 2024
Homeತಾಜಾ ಸುದ್ದಿರಾಮನವಮಿಯಂದು ಸಿಲಿಕಾನ್ ಸಿಟಿಯಲ್ಲಿ ರಾಮ ರಥಯಾತ್ರೆ: ಸರ್ವಧರ್ಮಿಯರ ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದ ಆರ್. ಅಶೋಕ್

ರಾಮನವಮಿಯಂದು ಸಿಲಿಕಾನ್ ಸಿಟಿಯಲ್ಲಿ ರಾಮ ರಥಯಾತ್ರೆ: ಸರ್ವಧರ್ಮಿಯರ ವ್ಯಾಪಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದ ಆರ್. ಅಶೋಕ್

spot_img
- Advertisement -
- Advertisement -

ಬೆಂಗಳೂರು:  ರಾಮನವಮಿಯ ಪರ್ವಕಾಲದಲ್ಲಿ ಇದೇ ಮೊದಲಬಾರಿ ಬೃಹತ್ ರಾಮ ರಥಯಾತ್ರೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ರಾಮನವಮಿಯ ದಿನವಾದ ಏಪ್ರಿಲ್ 10 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಪದ್ಮನಾಭ ನಗರದ ವಾಜಪೇಯಿ ಕ್ರೀಡಾಂಗಣದಿಂದ ರಥಯಾತ್ರೆ ಆರಂಭವಾಗಲಿದೆ. ಇದರ ಜೊತೆ ಜಾನಪದ ಜಾತ್ರೆಯನ್ನ ಸಹ ಆಯೋಜಿಸಲಾಗಿದೆ ಎಂದರು…ಈ ರಾಮರಥ ಯಾತ್ರೆ ಮತ್ತು‌ ಜಾನಪದ ಜಾತ್ರೆಯಲ್ಲಿ ಅನ್ಯ ಧರ್ಮೀಯರ ವ್ಯಾಪಾರ ವಹಿವಾಟಿಗೆ ಯಾವುದೇ ನಿರ್ಬಂಧವಿಲ್ಲ ಎಂದು‌ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ…ರಾಮನನ್ನು ಪ್ರೀತಿಸುವ ಯಾರು ಬೇಕಾದರೂ ವ್ಯಾಪಾರ ಮಾಡಬಹುದಾಗಿದೆ. ಜಾತ್ರೆ ವ್ಯಾಪಾರಕ್ಕೆ ಯಾವುದೇ ಸಮುದಾಯಕ್ಕೆ ನಿರ್ಬಂಧವಿರುವುದಿಲ್ಲ ಎಂದಿದ್ದಾರೆ…

 ಏಪ್ರಿಲ್ 10 ಕ್ಕೆ ರಾಮ ನವಮಿಯನ್ನು ಇಡೀ ಪ್ರಪಂಚದಲ್ಲಿ ಆಚರಣೆ ಮಾಡುತ್ತಾರೆ ಅಂದೇ ಬೆಂಗಳೂರಿನ ಪದ್ಮನಾಭ ನಗರದಲ್ಲಿ ರಾಮರಥ ಯಾತ್ರೆ ಮಾಡುತ್ತೇವೆ.  ಸುಮಾರು 4 ಕಿಲೋಮೀಟರ್ ರಥಯಾತ್ರೆ ಮಾಡುತ್ತೇವೆ  ತಮಿಳುನಾಡಿನ ಇಸ್ಕಾನ್ ನವರು ರಥ ಕೊಡುತ್ತಾರೆ ಸುಮಾರು 10 ಸಾವಿರ ಜನ ಅಲ್ಲಿ ಭಾಗಿಯಾಗುತ್ತಾರೆ. ಮಂತ್ರಾಲಯದ ಶ್ರೀಗಳು ಸಹ ಈ ರಥಯಾತ್ರೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಕನಕ ಪೀಠದ ಶ್ರೀ, ಬಸವ ಮಾಧಾರ ಚನ್ನಯ್ಯ ಸ್ವಾಮೀಜಿಗಳು ಸಹ ಆಗಮಿಸುತ್ತಿದ್ದಾರೆ..ಇನ್ಮುಂದೆ ರಾಮ ರಥಯಾತ್ರೆ ನಿರಂತರವಾಗಿ ನಡೆಯಲಿದೆ ಎಂದರು..

- Advertisement -
spot_img

Latest News

error: Content is protected !!