Sunday, June 2, 2024
Homeಕರಾವಳಿಕಡಬ: ಮದುವೆಗೆ ಮುಂಚೆಯೇ ಯುವತಿ ಕೈಗೆ ಮಗು ಕೊಟ್ಟ ಯುವಕ :ಮದುವೆಯಾದ ಬಳಿಕ ಮಗು ನನ್ನದಲ್ಲ...

ಕಡಬ: ಮದುವೆಗೆ ಮುಂಚೆಯೇ ಯುವತಿ ಕೈಗೆ ಮಗು ಕೊಟ್ಟ ಯುವಕ :ಮದುವೆಯಾದ ಬಳಿಕ ಮಗು ನನ್ನದಲ್ಲ ಎಂದು ವರಸೆ ಬದಲಿಸಿದ ಗಂಡ

spot_img
- Advertisement -
- Advertisement -

ಕಡಬ:ಯುವತಿಯೊಬ್ಬಳಿಗೆ ಮದುವೆ ಮುಂಚೆಯೇ ಮಗು ಕರುಣಿಸಿ ಈಗ ಮಗು ನನ್ನದಲ್ಲ ಎಂದು ಯುವಕ ವರಸೆ ಬದಲಿಸಿದ್ದರಿಂದ ಯುವತಿಯೊಬ್ಬಳು ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಕಡಬದ ಯುವತಿಯೊಬ್ಬಳ ಮನೆಗೆ ದೀಕ್ಷಿತ್ ಎಂಬ ಯುವಕ ಆಗಾಗ್ಗೆ ಬರುತ್ತಿದ್ದ. ಇದೇ ಸಲುಗೆ ಮಿತಿ ಮೀರಿ ಯುವತಿ ಗರ್ಭ ಧರಿಸಿದ್ದಾಳೆ. ಅತ್ತ ಯುವಕ ಕೆಲಸಕ್ಕೆ ಅಂತಾ ಬೇರೆ ಕಡೆಗೆ ಹೋಗಿದ್ದಾನೆ. ವಿಷಯ ಮನೆಯವರಿಗೆ ಗೊತ್ತಾಗಿ ವಿವಾಹ ಮಾಡಲು ನಿರ್ಧರಿಸಿದ್ದಾರೆ. ಆಗಸ್ಟ್ 5, 2021 ರಂದು ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ನವೆಂಬರ್ 15, 2021ರಂದು ಯುವಕ ಪುತ್ತೂರು ವಿವಾಹ ನೋಂದಣಿ ಕಚೇರಿಯಲ್ಲಿ ಯುವತಿಯನ್ನು ಮದುವೆಯಾಗಿ ಬಳಿಕ ಮತ್ತೆ ಕೆಲಸಕ್ಕೆ ತೆರಳಿದ್ದಾನೆ.

ಹಾಗೇ ತೆರಳಿದವನು ಮತ್ತೆ ವರಸೆ ಬದಲಿಸಿದ್ದಾನೆ.ಆ ಮಗು ನನಗೆ ಹುಟ್ಟಿದ್ದಲ್ಲ, ಅದು ನನ್ನ ಮಗು ಅಲ್ಲ. ಡಿಎನ್ ಎ ಟೆಸ್ಟ್ ಮಾಡಿಸುತ್ತೇನೆ ಎಂದಿದ್ದಾನೆ. ಇದರಿಂದ ಕಂಗಲಾದ ಯುವತಿ ಇದೀಗ ನ್ಯಾಯಕ್ಕಾಗಿ ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

- Advertisement -
spot_img

Latest News

error: Content is protected !!