ಬೆಳ್ತಂಗಡಿ : ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ಏ.7 ರಂದು ರಾತ್ರಿ 10:30 ಗಂಟೆಗೆ 30ಕ್ಕೂ ಹೆಚ್ಚು ಪ್ರಯಾಣಿಕರು ರಸ್ತೆಯಲ್ಲಿ ನಿಂತಿದನ್ನು ಕಂಡ ರಕ್ಷಿತ್ ಶಿವರಾಂರವರು ಮತ್ತು ಉಜಿರೆ ಹಳ್ಳಿಮನೆ ಪ್ರವೀಣ್ ರವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ವೀಲ್ ಜಾಯಿಂಟ್ ಕಟ್ ಆಗಿ ಚಿಕ್ಕಮಗಳೂರು – ಧರ್ಮಸ್ಥಳ ಹೋಗುತ್ತಿದ್ದ ಸರಕಾರಿ ಬಸ್ ಕೆಟ್ಟು ನಿಂತಿತ್ತು. ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಿದ್ದ ಬಸ್ ಘಾಟಿಯ 8ನೇ ತಿರುವಿನಲ್ಲಿ ಸಿಲುಕಿಕೊಂಡಿದ್ದರು.
ಈ ಸಮಯದಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ರಕ್ಷಿತ್ ಶಿವರಾಮ್ ಮತ್ತು ಪ್ರವೀಣ್ ಹಳ್ಳಿಮನೆ ಗಾಡಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರಿಗೆ ಧೈರ್ಯ ತುಂಬಿ ಚಾರ್ಮಾಡಿ ಹಸನಬ್ಬ ರವರನ್ನು ಸಂಪರ್ಕಿಸಿ 2 ಜೀಪ್ ಮತ್ತು ಯುವ ಕಾಂಗ್ರೆಸಿನ ಅರುಣ್ ಮತ್ತು ಅಸಾರ್ ರವರ ವಾಹನ ಕರೆಸಿ ಹಾಗೂ ಕೆಲವರನ್ನು ರಸ್ತೆಯಲ್ಲಿ ಹೋಗುತ್ತಿದ್ದ ಬೆಳ್ತಂಗಡಿಯ ಸ್ಥಳೀಯರ ಗಾಡಿಯಲ್ಲಿ ಕೂರಿಸಿ ಕಳುಹಿಸಿ ಕೊಟ್ಟರು.
ಆತಂಕದಲ್ಲಿ ಇದ್ದ ಎಲ್ಲಾ ಪ್ರಯಾಣಿಕರಿಗೆ ಆಪದ್ಬಾಂಧವರಾಗಿ ಬಂದ ರಕ್ಷಿತ್ ಶಿವರಾಂ ಮತ್ತು ಉಜಿರೆ ಹಳ್ಳಿ ಮನೆ ಪ್ರವೀಣ್ ಕಾರ್ಯನೋಡಿ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.