Monday, June 8, 2026
Homeಕರಾವಳಿನಿಡ್ಲೆ: ಬೆಸ್ಟ್ ಫೌಂಡೇಶನ್ ವತಿಯಿಂದ  ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಊಟದ ತಟ್ಟೆ ಹಾಗೂ ಲೋಟ...

ನಿಡ್ಲೆ: ಬೆಸ್ಟ್ ಫೌಂಡೇಶನ್ ವತಿಯಿಂದ  ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಊಟದ ತಟ್ಟೆ ಹಾಗೂ ಲೋಟ ವಿತರಣೆ

- Advertisement -
- Advertisement -

ನಿಡ್ಲೆ: ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ  ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ  ವತಿಯಿಂದ ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟ ವಿತರಣೆ ಮತ್ತು ನಿಡ್ಲೆ ಪಂಚಾಯತ್,  ಮಹಾಗಣಪತಿ ಭಜನಾ ಮಂದಿರದಿಂದ  ಹಾಗೂ ಶಾಲಾ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ  ಬೆಳ್ತಂಗಡಿ ಬೆಸ್ಟ್  ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಭಾಗವಹಿಸಿದರು. 

ಈ ಸಂದರ್ಭದಲ್ಲಿ  ನಿಡ್ಲೆ ಪಂಚಾಯತ್  ಉಪಾಧ್ಯಕ್ಷರಾದ ಶ್ಯಾಮಲ, ಸದಸ್ಯರಾದ ಜಗದೀಶ ನಿಡ್ಲೆ, ಹೇಮಾವತಿ ಅಲ್ತಿಮಾರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗೌಡ, ನಿವೃತ್ತ ಶಿಕ್ಷಕರಾದ ಪ್ರಫುಲ್ಲ ಟೀಚರ್,  ಪಂಚಾಯತ್ ಅಭಿವೃದ್ದಿ ಅಧಿಕಾರಿ ರವಿ ,ಭಜನಾ ಮಂಡಳಿಯ ಅದ್ಯಕ್ಷರಾದ  ಜಯಂತ ಬಂಗೇರ ,ಶಾಲಾ ಮುಖ್ಯಶಿಕ್ಷಕರಾದ ಶಾಂತ ಶೆಟ್ಟಿ, ಶಕುಂತಲಾ ಶೆಟ್ಟಿ ಮತ್ತು ಭಜನಾ ಮಂಡಳಿ ಸದಸ್ಯರು ಹಾಗೂ ಪೋಷಕರು  ಉಪಸ್ಥಿತರಿದ್ದರು.

- Advertisement -

Latest News

error: Content is protected !!