Sunday, May 5, 2024
Homeಮನರಂಜನೆಯಶ್-ರಾಧಿಕಾ ಮನೆಯಲ್ಲಿ ಈ ಬಾರಿ ಸ್ಪೆಷಲ್ ರಕ್ಷಾ ಬಂಧನ

ಯಶ್-ರಾಧಿಕಾ ಮನೆಯಲ್ಲಿ ಈ ಬಾರಿ ಸ್ಪೆಷಲ್ ರಕ್ಷಾ ಬಂಧನ

spot_img
- Advertisement -
- Advertisement -

ಬೆಂಗಳೂರು : ನಿನ್ನೆ ರಕ್ಷಾ ಬಂಧನ ಹಬ್ಬ. ಬಹುತೇಕ ತಾರೆಯರೆಲ್ಲ ತಮ್ಮ ಸಹೋದರ ಸಹೋದರಿಯೊಂದಿಗೆ ಹಬ್ಬ ಆಚರಿಸಿದ್ರು. ಆದರೆ ಸ್ಟಾರ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಈ ಬಾರಿ ರಾಖಿ ಹಬ್ಬ ತುಂಬಾನೇ ಸ್ಪೆಷಲ್ ಆಗಿತ್ತು. ಅದಕ್ಕೆ ಕಾರಣ ಯಶ್ ಹಾಗೂ ರಾಧಿಕಾ ಮಗ- ಮಗಳು.

ಯಶ್ ಮಕ್ಕಳಿಗೆ ಇದು ವೊದಲ ರಕ್ಷಾ ಬಂಧನ ಹಬ್ಬ. ಬೇಬಿ ಐರಾ ತನ್ನ ಮುದ್ದು ತಮ್ಮನ ಕೈಗೆ ರಾಖಿ ಕಟ್ಟೋದರ ಮೂಲಕ ಹಬ್ಬ ಆಚರಿಸಿದ್ಳು. ಈ ಸುಂದರ ಕ್ಷಣಗಳ ಫೋಟೋಗಳನ್ನು ರಾಧಿಕಾ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಯಶ್ ಅವರ ಅಭಿಮಾನಿಗಳು ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಪುಟಾಣಿಗಳು ಮಾತ್ರವಲ್ಲದೇ ಯಶ್ ಕೂಡ ರಾಖಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ರು. ಯಶ್ ಸಹೋದರಿ ನಂದಿನಿ ಪ್ರತಿವರ್ಷದಂತೆ ಈ ವರ್ಷ ಕೂಡ ಅಣ್ಣ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಇನ್ನು ರಾಧಿಕಾ ಪಂಡಿತ್ ತಮ್ಮ ಸಹೋದರನೊಂದಿಗಿರುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡುವ ಸೋದರನಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಬೇಬಿ ಐರಾ ಯಶ್ & ಜೂನಿಯರ್ ಯಶ್ ಅವರ ಮೊದಲನೇ ವರ್ಷದ ರಾಕಿ ಹಬ್ಬದ ಸಂಭ್ರಮ…!! ???#TheNameIsYashBoss #AyraYash #JuniorYash #RadhikaPandit #RakshaBandhan

Posted by ಯಶ್ ಬಾಸ್ ಅಭಿಮಾನಿಗಳು on Monday, 3 August 2020

- Advertisement -
spot_img

Latest News

error: Content is protected !!