ಬಂಟ್ವಾಳ; ಅನಾರೋಗ್ಯದಿಂದಾಗಿ ಮಲಗಿದಲ್ಲೇ ಬೀಡಿ ಕಟ್ಟಿ ಜೀವನ ನಡೆಸುತ್ತಿರುವ ಕೊಳ್ನಾಡು ಗ್ರಾಮದ ಕಲ್ಕಾರ್ ಆಲಬೆ ನಿವಾಸಿ ಸುಶೀಲಾ ಅವರ ಕರುಣಾಜನಕ ಬದುಕಿನ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸುಶೀಲಾ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದರು.
ಅವರ ಆರೋಗ್ಯ ವಿಚಾರಿಸಿದ ಶಾಸಕರು ಸಂಪೂರ್ಣ ಮಾಹಿತಿ ಪಡೆದ ಬಳಿಕ ಅವರನ್ನು ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆಗಾಗಿ ಸೂಕ್ತವಾದ ವ್ಯವಸ್ಥೆಯನ್ನು ಮಾಡಿದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂಪೂರ್ಣ ತಪಾಸಣೆ ನಡೆಸಿದ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡಲು ಸ್ಥಳೀಯ ಬಿಜೆಪಿ ಪ್ರಮುಖರಿಗೆ ಜವಬ್ದಾರಿ ನೀಡಿದರು.
ಜೊತೆಗೆ ಬಡಕುಟುಂಬವಾಗಿರುವ ಇವರ ಮನೆ ಆರ್ಥಿಕ ಅಡಚಣೆಯಿಂದ ಅರ್ದದಲ್ಲಿ ನಿಂತಿರುವ ಬಗ್ಗೆ ಅನಾರೋಗ್ಯ ಪೀಡಿತೆ ಸುಶೀಲಾ ಅವರು ಶಾಸಕರ ಬಳಿ ತಿಳಿಸಿದಾಗ ಸ್ಪಂದಿಸಿದ ಅವರು ಬಾಕಿಯಾಗಿದ್ದ, ಮನೆಯ ಸಂಪೂರ್ಣ ಮಾಡಿಕೊಡುವ ಭರವಸೆ ನೀಡಿದ್ದಲ್ಲದೇ ಗುತ್ತಿಗೆದಾರನ್ನು ಕರೆದು ಕೂಡಲೇ ಮನೆಯನ್ನು ಸಂಪೂರ್ಣ ಮಾಡಿಕೊಡಿ ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಸಹಿತ ಹಣಕಾಸು ನೀಡುವುದಾಗಿ ತಿಳಿಸಿದರು.
ಬಿಜೆಪಿ ಪ್ರಮುಖರಾದ ಪ್ರಶಾಂತ್ ಕುಮಾರ್ ಶೆಟ್ಟಿ, ಸೀತಾರಾಮ ಶೆಟ್ಟಿ, ರಾಮಪ್ರಸಾದ್ ಶೆಟ್ಟಿ ತಿರುವಾಜೆ, ಗಣೇಶ್ ರೈ ಮಾಣಿ, ಪಿ.ಡಿ.ಒ ರೋಹಿಣಿ ಬಿ. ಸ್ಥಳಕ್ಕೆ ಭೇಟಿ ನೀಡಿದರು.


