Wednesday, June 3, 2026
Homeಕರಾವಳಿಅಯೋಧ್ಯೆಯ ರಾಮಲಲ್ಲಾನಿಗೆ ಬೆಳ್ಳಿ ಕಲಶಾಭಿಷೇಕ ಮಾಡಿದ ಶಾಸಕ ರಾಜೇಶ್ ನಾಯ್ಕ್

ಅಯೋಧ್ಯೆಯ ರಾಮಲಲ್ಲಾನಿಗೆ ಬೆಳ್ಳಿ ಕಲಶಾಭಿಷೇಕ ಮಾಡಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ ; ‌ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯ ರಾಮಲಲ್ಲಾನಿಗೆ ಬೆಳ್ಳಿ ಕಲಶಾಭಿಷೇಕ ಮಾಡಿದ್ದಾರೆ. ಕುಟುಂಬ ಸಮೇತರಾಗಿ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮ ದೇವರ ದರ್ಶನ ಪಡೆದಿದ್ದಾರೆ.

ಅಯೋಧ್ಯೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ನಡೆಯುತ್ತಿದೆ. ಇದರ ಅಂಗವಾಗಿ ನಡೆದ ಕಲಶಾರಾಧನೆ ಮತ್ತು ಎರಡು ಬೆಳ್ಳಿ ಕಲಶಗಳ ಅಭಿಷೇಕದಲ್ಲಿ ಸೇವಾಕರ್ತರಾಗಿ ಶಾಸಕರು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀರಾಮನ ಸೇವೆಗೈದು ಆಶೀರ್ವಾದ ಪಡೆದಿದ್ದಾರೆ.

ಈ ವೇಳೆ ಶಾಸಕರ ಪತ್ನಿ ಉಷಾ ಆರ್.ನಾಯ್ಕ , ಪುತ್ರ ಉನ್ನತ್ ನಾಯ್ಕ್,ಸೊಸೆ ಶ್ರೀಶಾ ನಾಯ್ಕ್ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದರು.

- Advertisement -

Latest News

error: Content is protected !!