Wednesday, May 1, 2024
Homeಇತರರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜೇಶ್ ಗುಂಡಿಗದ್ದೆ ನಾಪತ್ತೆ...! ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ...

ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜೇಶ್ ಗುಂಡಿಗದ್ದೆ ನಾಪತ್ತೆ…! ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು…!

spot_img
- Advertisement -
- Advertisement -

ಸುಳ್ಯ : ಬೆಳ್ಳಾರೆಯ ಉದ್ಯಮಿ ರಾಜೇಶ್ ಗುಂಡಿಗದ್ದೆ (47) ಯವರು ಸೆ. 4 ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ, ಅವರ ಪತ್ನಿ ವಿನಯ ಶ್ರೀಯವರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೆ. 5 ರಂದು ಅವರು ಠಾಣೆಗೆ ದೂರು ನೀಡಿದ್ದು, ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕೃಷಿಕರಾಗಿರುವ ರಾಜೇಶ್ ರವರು ತಮ್ಮ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಸೆ.4ರಂದು ಮನೆಯಿಂದ ತೆರಳಿದ್ದಾರೆ. ಸುಳ್ಯ ಕ್ಕೆ ಆಗಮಿಸಿದ ಅವರು ಬಳಿಕ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿರುವ ಬಗ್ಗೆ, ಹಾಗೂ ಬಂದಡ್ಕ ಟವರ್ ನಲ್ಲಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ಮೂಲಗಳು ತಿಳಿಸಿವೆ.

ರಾಜೇಶ್ ಅಧ್ಯಕ್ಷತೆಯ ಬೆಳ್ಳಾರೆ ರಬ್ಬರ್ ಉತ್ಪಾದಕರ ಸಂಘವೂ ಆಸುಪಾಸಿನ ಗ್ರಾಮಗಳ ರಬ್ಬರು ಬೆಳೆಗಾರರಿಂದ ರಬ್ಬರ್ ಹಾಲನ್ನು ಸಂಘಕ್ಕೆ ಖರೀದಿಸಿ ಒಂದಷ್ಟು ದಿನ ಬಿಟ್ಟು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಸಂಘವೂ ಹಾಲು ಹಾಕಿದ ಬೆಳೆಗಾರರಿಗೆ ಕೋಟಿಗಟ್ಟಲೆ ಹಣ ಕೊಡಲು ಬಾಕಿ ಇದೆ ಎನ್ನಲಾಗುತ್ತಿದೆ. ಇದರ ಜತೆಗೆ ಸಂಘದ ಹೆಸರಲ್ಲಿ ಪಡೆದ ಸಾಲ, ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ತಮ್ಮ ವೈಯಕ್ತಿಕ ನೆಲೆಯಲ್ಲಿ ರಾಜೇಶ್ ಮಾಡಿದ ಸಾಲವೂ ತುಂಬಾವಿದೆ ಎಂದು ಹೇಳಲಾಗುತ್ತಿದೆ. ಸಂಘದ ಹೆಸರಿನಲ್ಲಿರುವ ಸಾಲ ಮರುಪಾವತಿಸುವಂತೆ ಸಂಘದ ಕಟ್ಟಡದಲ್ಲಿ ಸ್ಥಳೀಯ ಬ್ಯಾಂಕೊಂದು ನೋಟೀಸ್ ಅಂಟಿಸಿದೆಯೆಂದು ಕೂಡ ಹೇಳಲಾಗುತ್ತಿದ್ದು, ಆ ಬ್ಯಾಂಕಲ್ಲಿ ಸುಮಾರು 1ಕೋಟಿ 30 ಲಕ್ಷದಷ್ಟು ರೂ. ಸಾಲವಿದೆಯೆನ್ನಲಾಗಿದೆ.

ಸಂಘದ ನಂಬಲರ್ಹ ಮೂಲಗಳ ಪ್ರಕಾರ, ಸಂಘವೂ ನಷ್ಟದಿಂದ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಕಂಪೆನಿಯೊಂದಕ್ಕೆ ಅದನ್ನು ಮಾರಾಟ ಮಾಡಿ ಬೆಳೆಗಾರರಿಗೆ ಹಣ ಪಾವತಿಸುವ ನಿರ್ಣಯಕ್ಕೆ ಸಂಘದ ಮಹಾಸಭೆಯೂ ಬಂದಿತ್ತು. ಹಾಗೂ ಅದರಂತೆ ಒಬ್ಬರು ಖರೀದಿದಾರರು ಮುಂದೆ ಬಂದು ಮುಂಗಡ ಹಣ ಕೂಡ ಪಾವತಿಸಿದ್ದರು. ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲು ಕಷ್ಟವೆಂದು ಅಭಿಪ್ರಾಯಪಟ್ಟು, ವ್ಯವಹಾರದಿಂದ ಹಿಂದೆ ಸರಿದರೆನ್ನಲಾಗಿದೆ.

- Advertisement -
spot_img

Latest News

error: Content is protected !!