- Advertisement -
![]()
- Advertisement -
ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 16, 17 ಮತ್ತು 18 ರಂದು ಒಟ್ಟು ಮೂರು ದಿನಗಳ ಕಾಲ ರಾಜಭವನ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೂರು ದಿನಗಳ ಕಾಲ ಸಂಜೆ 6 ರಿಂದ 7.30 ಗಂಟೆಯವರೆಗೆ ವೀಕ್ಷಣೆ ಮಾಡಬಹುದಾಗಿದ್ದು, ರಾಜಭವನದ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಸರ್ಕಾರದಿಂದ ವಿತರಿಸಿರುವ ಸ್ಪಷ್ಟವಾಗಿ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕಾಗಿದೆ.
ಸಾರ್ವಜನಿಕರು ರಾಜಭವನದ ಪ್ರವೇಶದ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್ ಟಾಪ್, ಕ್ಯಾಮೆರಾಗಳು ಮತ್ತು ಎಲ್ಲಾ ರೀತಿಯ ಎಲೆಕ್ಟಿಕಲ್ ಉಪಕರಣಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಚೂಪಾದ ವಸ್ತುಗಳು ಮತ್ತು ಎಲ್ಲ ರೀತಿಯ ಮೆಟಲ್ ವಸ್ತುಗಳು, ತಿಂಡಿ-ತಿನಿಸುಗಳು, ಪ್ಲಾಸ್ಟಿಕ್ ವಸ್ತುಗಳನ್ನು, ಬೆಂಕಿಪೊಟ್ಟಣ, ಲೈಟರ್‌ಗಳು, ಎಲ್ಲಾ ರೀತಿಯ ಬ್ಯಾಗ್ ಮತ್ತು ಕೈ ಚೀಲಗಳನ್ನು, ತಂಬಾಕು ಮತ್ತು ಮದ್ಯಪಾನ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- Advertisement -


