- Advertisement -
- Advertisement -
ಬೆಳ್ತಂಗಡಿ: ಬಡವರ ಪಾಲಿನ ಸಂಜೀವಿನಿ ಎಂದೇ ಪ್ರಸಿದ್ದಿ ಪಡೆದಿರುವ ರಾಜಕೇಸರಿ ಸಂಘಟನೆಯ ವತಿಯಿಂದ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಪಣಕಜೆಯ ಮುಂಡಾಡಿ ನಿವಾಸಿಯಾಗಿರುವ ಲಿಂಗಮ್ಮ ಪೂಜಾರಿ ಎಂಬವರಿಗೆ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಜಿಲ್ಲಾ ಸಂಚಾಲಕರಾದ ಲೋಕೇಶ ಶಬರಬಯಲು ಹಾಗೂ ಸದಸ್ಯರಾದ ಸದಾನಂದ ಕುಲಾಲ್, ಕವನ ಸಿ. ಶೆಟ್ಟಿ ಮನೋಜ್ ಕೋಟ್ಯಾನ್, ಪ್ರತೀಕ್ ನಾಯಕ್ ಹಾಗೂ ಸ್ಥಳೀಯ ನಿವಾಸಿ ಮಹಮ್ಮದ್ ಅಶ್ರಫ್ ಅವರು ಉಪಸ್ಥಿತರಿದ್ದರು
- Advertisement -