- Advertisement -
- Advertisement -
ಬೆಳ್ತಂಗಡಿ: ಉಜಿರೆಯ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ನೇತ್ರತ್ವದ “ಬದುಕು ಕಟ್ಟೋಣ” ತಂಡದಿಂದ ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಟ್ಯಾಂಕರ್ ಮೂಲಕ ಸಾನಿಟೈಸರ್ ಕೆಮಿಕಲ್ ಮಿಕ್ಸ್ ಮಾಡಿ ಮೂರು ದಿನಗಳಿಂದ ಬೆಳ್ತಂಗಡಿ ತಾಲೂಕಿನಾಧ್ಯಂತ ಸಂಚರಿಸಿ ಸಿಂಪಾಡಿಸುತ್ತಿದ್ದಾರೆ. ತಾಲೂಕಿನ ಎಲ್ಲ ಭಾಗಕ್ಕೆ ತೆರಳಿ ಸಾನಿಟೈಸರ್ ಕೆಮಿಕಲ್ ಮಿಕ್ಸ್ ಸಿಂಪಡಿಸುವ ಯೋಜನೆಯನ್ನು “ಬದುಕು ಕಟ್ಟೋಣ” ತಂಡ ಹಮ್ಮಿಕೊಂಡಿದೆ. ಹಾಗೆಯೆ ತಾಲೂಕಿನ ಎಲ್ಲ ನಾಗರಿಕರು ಈ ಕಾರ್ಯಕ್ಕೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಹತ್ಕಾರ್ಯಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಗುರುವಾಯನಕೆರೆ ನವಶಕ್ತಿ ರಾಜೇಶ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ.


- Advertisement -