Saturday, October 17, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಏ.30 ರಂದು ಸುರಿದ ಭಾರೀ ಗಾಳಿ ಮಳೆಗೆ ತಾಲೂಕಿನಾದ್ಯಂತ ಅಪಾರ ಹಾನಿ

ಬೆಳ್ತಂಗಡಿ : ಏ.30 ರಂದು ಸುರಿದ ಭಾರೀ ಗಾಳಿ ಮಳೆಗೆ ತಾಲೂಕಿನಾದ್ಯಂತ ಅಪಾರ ಹಾನಿ

- Advertisement -
- Advertisement -

ಬೆಳ್ತಂಗಡಿ ತಾಲೂಕಿನಾದ್ಯಂತ ಏ.30 ರಂದು ಮಧ್ಯಾಹ್ನ ನಂತರ ಸುರಿದ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ಅಲ್ಲಲ್ಲಿ ಮನೆಗೆ ಹಾನಿ ಸೇರಿದಂತೆ  ಮರಗಳು ಧರೆಗುರುಳಿ ಬಿದ್ದು  ಹಾನಿಯುಂಟಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಮನೆ ಮೇಲೆ ಅಂಗಳದಲ್ಲಿದ್ದ ತೆಂಗಿನ ಮರವೊಂದು ಮುರಿದು  ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೊಳಗಾಗಿದೆ.ಮನೆಯೊಳಗೆ ಮೂವರಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಮನೆಯವರು ಹತ್ತಿರದ ಮನೆಗೆ ಸ್ಥಳೀಯರು ಸ್ಥಳಾಂತರಿಸಿದ್ದಾರೆ.

ಉಜಿರೆ ಬೆಳಾಲ್ ಕ್ರಾಸ್ ಬಳಿ ಉಜಿರೆ ಪೇಟೆಯಿಂದ ನೀರ ಚಿಲುಮೆ ಬಳಿಯ ಮನೆಗೆ  ಸಂಚರಿಸುತ್ತಿದ್ದ  ಬೈಕ್ ಮೇಲೆ ಹೆದ್ದಾರಿ ಬದಿಯ ಮರ ತುಂಡಾಗಿ ಬಿದ್ದು ಬೈಕ್ ಗೆ ಹಾನಿಯುಂಟಾಗಿದೆ.ಅದೃಷ್ಟವಶಾತ್ ಸವಾರ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ   ಪಾರಾಗಿದ್ದಾರೆ. ಲಾಯಿಲ ಕಿಲ್ಲೂರು ರಸ್ತೆ ಬದಿಯ ಹಲವು ಮರಗಳು ಗಾಳಿಯ ರಭಸಕ್ಕೆ ಉರುಳಿ ಬಿದ್ದ ಪರಿಣಾಮ ಅಲ್ಲಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆಯಲ್ಲದೇ ತಾಲೂಕಿನ ವಿವಿಧೆಡೆಗಳಲ್ಲಿಯೂ ವಿಪರೀತ ಗಾಳಿಯಿಂದಾಗಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!