Tuesday, September 26, 2023
Homeತಾಜಾ ಸುದ್ದಿಪ್ಲೀಸ್ ಮರಿಯಾನೆಯನ್ನು ರಕ್ಷಿಸಿ ಎಂದು ಸಿಎಂಗೆ ಪತ್ರ ಬರೆದ ರಾಹುಲ್ ಗಾಂಧಿ

ಪ್ಲೀಸ್ ಮರಿಯಾನೆಯನ್ನು ರಕ್ಷಿಸಿ ಎಂದು ಸಿಎಂಗೆ ಪತ್ರ ಬರೆದ ರಾಹುಲ್ ಗಾಂಧಿ

- Advertisement -
- Advertisement -

ಚಾಮರಾಜನಗರ: ಭಾರತ್ ಜೋಡೋ ಯಾತ್ರೆಗೆ ಎರಡು ದಿನ ಬ್ರೇಕ್ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಮರಿ ಆನೆಯೊಂದು ತನ್ನ ತಾಯಿಯ ಜೊತೆ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದನ್ನು ರಾಹುಲ್ ನೋಡಿದ್ದಾರೆ. ಈ ದೃಶ್ಯವನ್ನು ಕಂಡು ರಾಹುಲ್ ಗಾಂಧಿಯವರು ನೊಂದಿದ್ದಾರೆ. ಇದೀಗ ಈ ಬಗ್ಗೆ ಗಮನ ಹರಿಸುವಂತೆ ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ನಾನು ರಾಜಕೀಯ ಗಡಿಗಳಾಚೆಗೆ ದಾಟಿ ಮಾನವೀಯ ದೃಷ್ಟಿಯಿಂದ ಆನೆಯನ್ನು ಉಳಿಸಲು ನಿಮ್ಮ ಮನವಿ ಮಾಡುತ್ತೇನೆ. ಸರಿಯಾದ ಚಿಕಿತ್ಸೆ ನೀಡಿದರೆ ಅದು ಬದುಕುಳಿಯುತ್ತದೆ ಎಂದು ನನಗೆ ವಿಶ್ವಾಸವಿದೆ. ಆನೆಯನ್ನು ಉಳಿಸಲು ನೀವು ಸಮಯೋಚಿತ ಸಹಾಯವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!