Thursday, June 4, 2026
Homeತಾಜಾ ಸುದ್ದಿರಾಗಿಣಿ ಹಾಗೂ ನಟಿ ಸಂಜನಾರ ಬಿಡುಗಡೆಗಾಗಿ ಬೆದರಿಕೆ ಕರೆ- ಎನ್ ಡಿ ಪಿ ಎಸ್ ಕೋರ್ಟ್...

ರಾಗಿಣಿ ಹಾಗೂ ನಟಿ ಸಂಜನಾರ ಬಿಡುಗಡೆಗಾಗಿ ಬೆದರಿಕೆ ಕರೆ- ಎನ್ ಡಿ ಪಿ ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬಾಂಬ್ ಹಾಕುವ ಬೆದರಿಕೆ!…

- Advertisement -
- Advertisement -

ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ಹಾಗೂ ನಟಿ ಸಂಜನಾಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದಾರೆ. ಆದರೆ ಅವರ ಬಿಡುಗಡೆಗಾಗಿ ಬೆದರಿಕೆ ಕರೆ ಬಂದಿದ್ದು ಸಂಚಲನ ಮೂಡಿಸಿದೆ. ಬಿಡುಗಡೆ ಮಾಡದಿದ್ದರೆ ಬಾಂಬ್ ಹಾಕ್ತೀವಿ ಎಂದು ಎನ್ ಡಿ ಪಿ ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಕರೆ ಬಂದಿದೆ .

ಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯಬೇಕು ಮತ್ತು ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಜೈಲಿನಲ್ಲಿರುವ ಮಾದಕ ನಟಿ ರಾಗಿಣಿ ಹಾಗೂ ಸಂಜನಾಗೆ ಜಾಮೀನು ನೀಡಬೇಕು ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರ ತುಮಕೂರಿನಿಂದ ಸಿಸಿಹೆಚ್ ನ್ಯಾಯಾಲಯಕ್ಕೆ ಪತ್ರ ಬರೆದಿದ್ದು, ಪತ್ರದಲ್ಲಿ ಕವರ್ ನ ಒಳಗೆ ಬಾಂಬ್ ಇಟ್ಟಿದ್ದೇವೆ ಎಂದು ಬರೆದಿದ್ದರು.ಇನ್ನೊಂದು ಪತ್ರ ಡಿಸಿಪಿ ರವಿಕುಮಾರ್ ಅವರ ಹೆಸರಿಗೆ ಬಂದಿತ್ತು.

ಕೂಡಲೇ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ಡಿಟೆಕ್ಟಿವ್ ತಂಡ ಪರಿಶೀಲನೆ ನಡೆಸಿದಾಗ ಕವರ್ ನಲ್ಲಿ ಡಿಟೋನೇಟರ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಮತ್ತು ಕೇಂದ್ರ ವಿಭಾಗದ ಪೊಲೀಸರೊನ್ನಳಗೊಂಡ ತಂಡದಿಂದ ಆರೋಪಿ ಪತ್ತೆಗಾಗಿ ಕಾರ್ಯಚರಣೆ ನಡೆಯುತ್ತಿದ್ದು ಬೆಂಗಳೂರು ನಗರ ಕಮೀಷನರ್ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಕೆಎಸ್ಆರ್ ಪಿ ಮತ್ತು ಒಂದು ಕ್ಯೂ ಆರ್ ಟಿ ತುಕಡಿ ನಿಯೋಜನೆ ಮಾಡಲಾಗಿದ್ದು ಬಾಂಬ್ ಬೆದರಿಕೆ ಪತ್ರ ಬಂದ ಹಿನ್ನಲೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ.

- Advertisement -

Latest News

error: Content is protected !!