Wednesday, May 8, 2024
Homeಕರಾವಳಿಕಾರಿಂಜ ಕ್ಷೇತ್ರಕ್ಕೆ ಕಂಟಕವಾದ ಕಲ್ಲುಗಣಿಗಾರಿಕೆ!…

ಕಾರಿಂಜ ಕ್ಷೇತ್ರಕ್ಕೆ ಕಂಟಕವಾದ ಕಲ್ಲುಗಣಿಗಾರಿಕೆ!…

spot_img
- Advertisement -
- Advertisement -

ಮಂಗಳೂರು: ಇತ್ತೀಚಿಗೆ ತಾನೇ ಮಳೆಯಿಂದ ಕಾರಿಂಜ ಕ್ಷೇತ್ರದಲ್ಲಿ ಗೋಡೆ ಕುಸಿತ ಕಂಡಿತ್ತು. ಇದರ ಬೆನ್ನಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರ ಪರಿಣಾಮವಾಗಿ
ಅತ್ಯಂತ ಪುರಾತನ ಕ್ಷೇತ್ರ ಕುಸಿದು ಬೀಳುವ ಆತಂಕದಲ್ಲಿದೆ. ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಕ್ಷೇತ್ರದ ಅಡಿಪಾಯ ಅಲುಗಾಡಲು ಗಣಿಗಾರಿಕೆ ಪ್ರಮುಖ ಕಾರಣ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ.

ಇತ್ತೀಚೆಗೆ ಸುರಿದ ಮಳೆಗೆ ಈ ದೇವಸ್ಥಾನದ ಆವರಣ ಗೋಡೆಯ ಸಹಿತ ಅಡಿಪಾಯದ ಮಣ್ಣು ಹಾಗೂ ಕಲ್ಲು ಬಂಡೆಗಳು ಕುಸಿದಿದ್ದವು. ಇದು ಮಳೆಯಿಂದ ಕುಸಿದು ಬಿದ್ದಿದೆ ಎಂದು ಮೇಲ್ನೋಟಕ್ಕೆ ಹೇಳಬಹುದಾಗಿದ್ದರೂ, ಈ ಕುಸಿತಕ್ಕೆ ಬೆಟ್ಟದ ಬುಡದ ಸುತ್ತಮುತ್ತ ಸ್ಪೋಟಕಗಳನ್ನು ಸಿಡಿಸಿ ನಡೆಯುತ್ತಿರುವ ಅಕ್ರಮ ಕಪ್ಪು ಕಲ್ಲುಗಣಿಗಾರಿಕೆಯೇ ಕಾರಣವಾಗಿದೆ. ಸ್ಪೋಟದ ತೀವ್ರತೆಗೆ ಬೆಟ್ಟದ ಕಲ್ಲಿನ ಪದರಗಳಲ್ಲಿ ಬಿರುಕು ಬಿಡುತ್ತಿವೆ. ಈ ಬಿರುಕು ಮಳೆಗಾಲದ ಸಂದರ್ಭದಲ್ಲಿ ನೀರು ಹರಿದು ಬೆಟ್ಟದ ಸುತ್ತ ಕುಸಿಯಲು ಪ್ರಾರಂಭವಾಗಿದೆ ಎಂದು ಇಲ್ಲಿನ ಜನ ಅಭಿಪ್ರಾಯ ಪಡುತ್ತಿದ್ದು,ಸಂಭಂದ ಪಟ್ಟ ಇಲಾಖೆಗಳು ಈ ಕುರಿತು ಶೀಘ್ರ ಕ್ರಯೋ ಕಾರ್ಯೋನ್ಮುಖ ರಾಗುವ ಅವಶ್ಯಕತೆ ಇದೆ.

- Advertisement -
spot_img

Latest News

error: Content is protected !!