Tuesday, July 1, 2025
Homeತಾಜಾ ಸುದ್ದಿಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​ ಮತ್ತು ಕ್ರಾಫ್ಟ್​ ಮಾಡುತ್ತಿದ್ದು ಹಳೆಯ ಪೇಪರ್​ ಮತ್ತು ಕೆಲ ಬೇರೆ ಬೇರೆ ವಸ್ತುಗಳನ್ನು ಬಳಸಿಕೊಂಡು ಗ್ರೀಟಿಂಗ್​​ಗಳನ್ನು ಮಾಡುತ್ತಿದ್ದಾರೆ.

ತಾವು ಮಾಡಿದ ಗ್ರೀಟಿಂಗ್​​ಗಳನ್ನು ಜೈಲಿನ ಅಧಿಕಾರಿಗಳಿಗೂ ಕೊಟ್ಟಾಗ ಅಧಿಕಾರಿಗಳು ತೆಗೆದುಕೊಂಡಿಲ್ಲ.ರಾಗಿಣಿ ಹಲವಾರು ಬಾರಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಗ್ರೀಟಿಂಗ್​ ತೆಗೆದುಕೊಂಡಿದ್ದಾರೆ. ಜೈಲುವಾಸದ ಬಹುತೇಕ ಸಮಯವನ್ನು ಇಂತಹ ಕೆಲಸದಲ್ಲೇ ಕಳೆಯುತ್ತಿರುವ ನಟಿಯರು ಜೈಲಿನ ಇತರೆ ಕೈದಿಗಳ ಜೊತೆ ಅನ್ಯೋನ್ಯದಿಂದ ವರ್ತಿಸಿ ಉತ್ತಮ ಖೈದಿಗಳೆನಿಸಿಕೊಳ್ಳುತ್ತಿದ್ದಾರೆ.

- Advertisement -
spot_img

Latest News

error: Content is protected !!